Latest

IOCL ನಲ್ಲಿ 506 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂಡಿಯನ್ ಆಯಿಲ್ ಕಾರ್ಫೊರೇಷನ್ ಲಿಮಿಟೆಡ್ (IOCL) ಹಲವು ರಾಜ್ಯಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್, ಜೂನಿಯರ್ ನರ್ಸಿಂಗ್ ಅಸಿಸ್ಟೆಂಟ್, ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಲಿಸ್ಟ್ ಸೇರಿದಂತೆ 506 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

Home add -Advt

ರಿಫೈನರೀಸ್ ಹಾಗೂ ಪೆಟ್ರೋಕೆಮಿಕಲ್ ಘಟಕಗಳಾದ ಪಶ್ಚಿಮ ಬಂಗಾಳದ ಹಲ್ದಿಯಾ, ಹರ್ಯಾಣದ ಪಾಣಿಪತ್, ಒಡಿಶಾದ ಪಾರಾದಿಪ್, ಗುವಾಹಟಿ ದಿಗ್ಬಾಯ್, ಅಸ್ಸಾಂ ನ ಬೊಂಗೈಗಾಂವ್, ಗುಜರಾತ್ ನ ವಡೋದರಾ, ಬಿಹಾರದ ಬರೌನಿ ಹಾಗೂ ಉತ್ತರ ಪ್ರದೇಶದ ಮಥುರಾದಲ್ಲಿ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 25,000 ರೂಪಾಯಿಯಿಂದ 1,05,000 ರು ವರೆಗೆ ದೊರೆಯಲಿದೆ.

ನೇಮಕಾತಿಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಲು IOCL ​ನ ಅಧಿಕೃತ ವೆಬ್​ಸೈಟ್ www.iocl.comಗೆ ಭೇಟಿ ನೀಡಬೇಕು
ಬಳಿಕ Whats New ಆಯ್ಕೆಗೆ ತೆರಳಿ ‘Requirement of Experienced Non-Executive Personnel 2021 in IOCL, Refineries Division’ ಎಂಬ ಆಯ್ಕೆಗೆ ಹೋಗಬೇಕು. ನಂತರ “Click here to Apply Online” ಎಂಬುದರ ಮೇಲೆ ಕ್ಲಿಕ್ ಮಾಡಿ ಅರ್ಜಿ ತುಂಬಬಹುದಾಗಿದೆ.

2 ವಾರಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ; ಹೊರಟ್ಟಿ ಮಾಹಿತಿ
ನಿಮ್ಮಪ್ಪನೇ ಹೊಗಳಿದ್ದರು, ನಿಮ್ಮದೇನು? ಎಂದ ಸಿ.ಸಿ.ಪಾಟೀಲ

Related Articles

Back to top button