Kannada NewsKarnataka News

ಜಿಐಟಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ “ಗೋಲ್ಡನ್ ವಾಯ್ಸ್ ಆಫ್ ಬೆಳಗಾವಿ” ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆ ಎಲ್‌ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ  ರಾಜ್ ಬಿಚು,  ಶ್ರೀಜ್ ಧಾನಿ ಮತ್ತು  ಮೇಘನಾ ಕುಲಕರ್ಣಿ ಅವರನ್ನು ಒಳಗೊಂಡ ಅಸಾವರಿ ತಂಡವು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಸಿಕ್ ರಂಜನ್ ಅವರು ಆಯೋಜಿಸಿದ “ಗೋಲ್ಡನ್ ವಾಯ್ಸ್ ಆಫ್ ಬೆಳಗಾಂ” ಅನ್ನು ಗೆದ್ದುಕೊಂಡಿದೆ.

ಇದರಲ್ಲಿ ಭಾಗವಹಿಸುವವರು 1970 ಕ್ಕಿಂತ ಹಿಂದಿನ ಹಳೆಯ ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಬೇಕಾಗಿತ್ತು ಹಾಗೂ ಈ ಸ್ಪರ್ಧೆ ಏಕವ್ಯಕ್ತಿ ಮತ್ತು ಡುಯೆಟ್ ವಿಭಾಗಗಳಲ್ಲಿ ಹಾಡುಗಳನ್ನು ಪ್ರದರ್ಶಿಸಬೇಕಾಗಿತ್ತು. ಇದರಲ್ಲಿ  ದೇಶಭಕ್ತಿ, ಶಾಸ್ತ್ರೀಯ, ರೋಮ್ಯಾಂಟಿಕ್, ದುಃಖ, ಗಜಲ್  ಮತ್ತು ಇನ್ನೂ ಅನೇಕ ವಿಧಗಳಲ್ಲಿ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಹಾಡಬೇಕಿತ್ತು.

ಇದರಲ್ಲಿ ಜಿ ಐ ಟಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕೆಲವು ಹಾಡುಗಳು -ಆಯೆ ಮೇರೇ ಪ್ಯಾರೆ ವತನ್, ಯೆ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ, ಆಯೆಗಾ ಆಯೆಗಾ ಆನೆವಾಲಾ, ದಿಲ್-ಎ-ನಾಡಾನ್, ದಿವಾನಾ ಹುವಾ ಬಾದಲ್, ಝಣಕ್ ಝಣಕ್ ತೋರಿ ಬಾಜೇ ಪಾಯಲೀಯ,   ನಾಚೆಮನ್ ಮೋರಾ, ಗೋವಿಂದ ಆಲಾ ರೇ ಆಲಾ, ಮೇರಿ ಜಾನ್‌ ಬಲ್ಲೆ ಬಲ್ಲೆ, ಸಾಜ್ ಹೋ ತುಮ್ ಆವಾಜ್ ಹು ಮೇನ್, ಹಮ್ ಸೆ ಆಯನಗಯಾ, ರಾಜಾ ಕಿಯೆಗಿ ಬಾರತ್  ಮತ್ತು ಇನ್ನೂ ಅನೇಕ ಗೀತೆಗಳನ್ನು ನಾಲ್ಕು ಸುತ್ತುಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಸ್ತುತ ಪಡಿಸಿ ೨೫೦೦೦/- ರೂಪಾಯಿಗಳೊಂದಿಗೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಜೊತೆಗೆ ಜಿ ಐ ಟಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಈ ಮೂರೂ ವಿದ್ಯಾರ್ಥಿಗಳಿಗೆ ರೂ ೧೦,೦೦೦/- ಗಳನ್ನೂ ಪ್ರತಿ ವಿದ್ಯಾರ್ಥಿಗೆ ವಿಶೇಷ ಪ್ರೋತ್ಸಾಹ ಧನವನ್ನು ನೀಡಿ ಅಭಿನಂದಿಸಿದೆ.

ಈ ಸಮಯದಲ್ಲಿ ಜಿ ಐ ಟಿ ಆಡಳಿತ ಮಂಡಳಿಯ ಅಧ್ಯಕ್ಷ   ಎಂ. ಆರ್. ಕುಲಕರ್ಣಿ, ಕೆ ಎಲ್ ಎಸ್ ಉಪಾಧ್ಯಕ್ಷ  ರಾಮ್ ಭಂಡಾರೆ, ಕೆ ಎಲ್ ಎಸ್ ಕಾರ್ಯದರ್ಶಿ  ವಿವೇಕ್ ಕುಲಕರ್ಣಿ, ಜಿ ಐ ಟಿ ಆಡಳಿತ ಮಂಡಳಿ ಸದಸ್ಯರಾದ  ಎಸ್. ವಿ. ಗಣಾಚಾರಿ,  ವಿನಾಯಕ್ ಲೋಕುರ್, ಪ್ರಾಚಾರ್ಯ ಪ್ರೊ. ಡಿ. ಎ. ಕುಲಕರ್ಣಿ ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button