Kannada NewsKarnataka NewsLatest
*ಕಾಂಗ್ರೆಸ್ ಮುಖಂಡರ ಹತ್ಯೆ ಕೇಸ್; ಸಬ್ ಇನ್ಸ್ ಪೆಕ್ಟರ್ ಸೇರಿ 6 ಪೊಲೀಸರು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ಕೋಲಾರ: ಕೆಲ ದಿನಗಳ ಹಿಂದೆ ಕೋಲಾರದಲ್ಲಿ ನಡೆದಿದ್ದ ಇಬ್ಬರು ಕಾಂಗ್ರೆಸ್ ಮುಖಂಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಅ.21ರಂದು ಮಾಲೂರು ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಹಾಗೂ ಅ.23ರಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಕರ್ತವ್ಯ ಲೋಪ ಆರೋಪದಲ್ಲಿ ಮಾಲೂರು ಪೊಲೀಸ್ ಠಾಣೆ ಹಾಗೂ ಶ್ರೀನಿವಾಸಪುರ ಪೊಲೀಸ್ ಹಾಣೆಯ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 6 ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.
ಮಾಲೂರು ಠಾಣೆ ಎ ಎಸ್ ಐ ಪ್ರಕಾಶ್, ಬೀಟ್ ಕಾನ್ಸ್ ಟೇಬಲ್ ಗಳಾದ ರಾಮಪ್ಪ, ಅನಂತಮೂರ್ತಿ, ಡಿಎ ಆರ್ ಪೇದೆ ಅನಿಲ್ ಕುಮಾರ್, ಶ್ರೀನಿವಾಸಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಈಶ್ವರಪ್ಪ, ಮುಖ್ಯಪೇದೆ ದೇವರಾಜ್ ರೆಡ್ಡಿ, ಮಂಜುನಾಥ್ ಸಸ್ಪೆಂಡ್ ಆದವರು. ಎಸ್ ಪಿ ಎಂ.ನಾರಾಯಣ್ ಅವರು 6 ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.