Karnataka News

*ಕೃಷಿ ಹೊಂಡದಲ್ಲಿ ಬಿದ್ದು ಉಪನ್ಯಾಸಕ ಸಾವು*

ಪ್ರಗತಿವಾಹಿನಿ ಸುದ್ದಿ: ಜಮೀನು ಕೆಲಸ ಮುಗಿಸಿ, ಕೃಷಿ ಹೊಂಡದ ಬಳಿ ಕೈಕಾಕು ತೊಯಲು ಹೋಗಿ ಆಕಸ್ಮಿಅವಾಗಿ ಕೃಷಿ ಹೊಂಡಕ್ಕೆ ಬಿದ್ದು ಉಪನ್ಯಾಸಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ವಂಗಿಮಳ್ಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಂಕರ ರೆಡ್ಡಿ (48) ಮೃತ ದುರ್ದೈವಿ.

Home add -Advt

ಉಪನ್ಯಾಸಕರಾಗಿದ್ದ ಶಂಕರ ರೆಡ್ಡಿ, ಕೃಷಿ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದರು. ಜಮೀನಿಗೆ ಹೋದವರು ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಕೃಷಿ ಹೊಂಡದ ಬಳಿ ಚಪ್ಪಲಿ, ಟವಲ್ ಪತ್ತೆಯಾಗಿದೆ. ಕೃಷಿ ಹೊಂಡದ ಮೂಲೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button