
ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರೊನ್ಹಾ ಎಂಟರ್ ಪ್ರೈಸೆಸ್ ಮಾಲಕರು ಹಾಗು ನಿವೃತ್ತ ಶಿಕ್ಷಕರೂ ಆಗಿದ್ದ ಎಲ್.ಐ ನರೊನ್ಹಾ (84) ವಿಧಿವಶರಾಗಿದ್ದಾರೆ.
ಮೃತರು ಉತ್ತಮ ಶಿಕ್ಷಕರಾಗಿ ಸೆಂಟ್ ಅಂಥೋನಿ ಪ್ರಾಥಮಿಕ ಶಾಲೆ ಹಾಗು ಆವೆಮರಿಯಾ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರರು. ನಗರಸಭೆಯ ಸಿಬ್ಬಂದಿಯಾಗಿಯೂ, ಅಕ್ಷಯ ಕೋ ಅಪರೇಟಿವ್ ಬ್ಯಾಂಕಿನ ಸ್ಥಾಪಕ ನಿರ್ದೇಶಕರಾಗಿಯೂ ನಿಸ್ವಾರ್ಥವಾದ ಸೇವೆ ಸಲ್ಲಿಸಿದ್ದರು. ನರೋನ್ಹಾ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ ಸೆ.12ರಂದು ಬೆಳಿಗ್ಗೆ 11ಗಂಟೆಗೆ ಶಿರಸಿಯ ಸೆಂಟ್ ಅಂಥೋನಿ ಚರ್ಚ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.