Kannada NewsKarnataka News

ಯುವ ರೈತ ಆತ್ಮಹತ್ಯೆಗೆ ಶರಣು

ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಸಾಲ ಬಾಧೆ ತಾಳದೆ ಯುವ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮದ ಯುವ ರೈತ ಶ್ರೀಶೈಲ್ ಶಶಿಕಾಂತ್ ಕರಾಡಕರ್ (೩೨) ತನ್ನ ಒಕ್ಕಲುತನ ಸಲವಾಗಿ ಗ್ರಾಮದ ವಿವಿಧ ಸಹಕಾರಿ ಸಂಸ್ಥೆಯ ಹಾಗೂ ಇನ್ನಿತರ ಆರ್ಥಿಕ ಸಂಸ್ಥೆಗಳಲ್ಲಿ ಸುಮಾರು ಎಂಟು ಲಕ್ಷ ರೂಪಾಯಿ ಸಾಲ ಪಡೆದಿದ್ದ.

Home add -Advt

ಈ ವರ್ಷ ಕೃಷ್ಣಾ ನದಿ ಪ್ರವಾಹದಲ್ಲಿ ಹೊಲದಲ್ಲಿ ಬೆಳೆದ ಕಬ್ಬು ಬೆಳೆ ನಾಶವಾಗಿದ್ದು ಕಿರಾಣಿ ಅಂಗಡಿ ವ್ಯಾಪಾರದಲ್ಲಿ ಕೂಡ ನಷ್ಟ ಉಂಟಾಗಿದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕೆಂದು ಮನನೊಂದು ಇಂದು ಮುಂಜಾನೆ ತನ್ನ ವಾಸಿಸುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಹೆಂಡತಿ ದೂರು ನೀಡಿದ್ದಾಳೆ. ಈ ದೂರಿನ ಪ್ರಕಾರ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Related Articles

Back to top button