Latest

*ಲ್ಯಾಪ್ ಟಾಪ್ ಚಾರ್ಜ್ ಮಾಡುವಾಗ ದುರಂತ; ಕರೆಂಟ್ ಶಾಕ್ ಗೆ ವೈದ್ಯೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಲ್ಯಾಪ್ ಟಾಪ್ ಚಾರ್ಜ್ ಮಾಡುವಾಗ ವಿದ್ಯುತ್ ಪ್ರವಹಿಸಿ ವೈದ್ಯೆಯೊಬ್ಬರು ಸಾವನ್ನಪ್ಪಿರುವ ಘಟನೆ ತಮಿಳುನಡಿನ ಚನ್ನೈನಲ್ಲಿ ನಡೆದಿದೆ.

32 ವರ್ಷದ ಡಾ.ಸರಣಿತಾ ಮೃತ ವೈದ್ಯೆ. 25 ದಿನಗಳ ತರಬೇತಿಗಾಗಿ ಚೆನ್ನೈನ ಕಿಲ್ಪಾಕಂ ಮನೋವೈದ್ಯಕೀಯ ಆಸ್ಪತ್ರೆಗೆ ಟ್ರೈನಿ ಡಾಕ್ಟರ್ ಆಗಿ ಬಂದಿದ್ದರು. ಈ ವೇಳೆ ಸರಣಿತಾ ಅಯನವರಂನ ಹಾಸ್ಟೇಲ್ ನಲ್ಲಿ ತಂಗಿದ್ದರು.

ಹಾಸ್ಟೇಲ್ ಕೊಠಡಿಯಲ್ಲಿ ಲ್ಯಾಪ್ ಟಾಪ್ ಚಾರ್ಜ್ ಮಾಡಲು ಯತ್ನಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಿಲ್ವೆಲ್ಲೂರು ಜಿಲ್ಲೆಯ ಡಾ.ಸರಣಿತಾ 2016ರಲ್ಲಿ ಡಾ.ಉದಯಕುಮಾರ್ ಅವರನ್ನು ವಿವಾಹವಾಗಿದ್ದು, ದಂಪತಿಗೆ 5 ವರ್ಷದ ಮಗುವಿದೆ. ಉದಯಕುಮಾರ್ ಕೊಯಮತ್ತೂರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಸರಣಿತಾ ಟ್ರೇನಿಂಗ್ ಗಾಗಿ ಚೆನ್ನೈಗೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button