ಪ್ರಗತಿವಾಹಿನಿ ಸುದ್ದಿ, ಅಥಣಿ- ಲಕ್ಷ್ಮಣ ಸವದಿ ೨೦೧೮ ರ ವಿಧಾನಸಭೆ ಚುನಾವಣೆಯನ್ನು ಸೋಲಲು ಅವನ ನಾಲಗೆಯೇ ಕಾರಣ. ತನ್ನ ನಾಲಿಗೆಯಿಂದಲೇ ಆತ ಹಾಳಾಗಿದ್ದಾನೆ. ಮತ್ತೆ ಈಗ ಅದೇ ರೀತಿಯಾದರೆ ಹೇಗೆ?, ಅಧಿಕಾರ ಬರುತ್ತೆ ಅಥವಾ ಹೋಗುತ್ತೆ. ಆದರೆ ಜನರ ಪ್ರೀತಿ ಬಹಳ ಮುಖ್ಯವಾಗಿದೆ, ನಾಲಿಗೆಯ ನಿಯಂತ್ರಣ ಬಹಳ ಮುಖ್ಯವಾಗಿದೆ. ಈ ರೀತಿ ಮಾತನಾಡಬಾರದು ಎಂದು ಏಕ ವಚನದಲ್ಲಿ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ದರೂರ ಗ್ರಾಮದ ಮುಖಂಡ ಅಮೂಲ ನಾಯಿಕ ಇವರ ಮನೆಯಲ್ಲಿ ರಮೇಶ ಜಾರಕಿಹೊಳಿ ಹಾಗೂ ಮಹೇಶ ಕುಮಠಳ್ಳಿ ಅವರು ಕಾರ್ಯಕರ್ತರ ಸಭೆಯನ್ನು ಆಯೋಜಿಸಿದ್ದರು. ಸಭೆಯ ನಂತರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಅಥಣಿ ತಾಲೂಕಿನ ಜನರು ನನ್ನನ್ನು ತುಂಬಾ ನಂಬಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ನಾನು ಇಲ್ಲಿ ಬರಲಾಗಿಲ್ಲ. ಅದಕ್ಕಾಗಿ ನಾನು ಈಗ ಅಥಣಿ ತಾಲೂಕಿನ ಜನತೆಗೆ ಕ್ಷಮೆ ಕೇಳಲು ಬಂದಿದ್ದೇನೆ ಎಂದರು.

ಇದನ್ನೂ ಓದಿ – ಮತ್ತೊಮ್ಮೆ ವಿವಾದಕ್ಕೆ ಬಿದ್ದ ಲಕ್ಷ್ಮಣ ಸವದಿ
ನಾವು ೧೭ ಜನರು ಅನರ್ಹರು ಒಗ್ಗಟ್ಟಾಗಿದ್ದೇವೆ. ನಾವು ಈವರೆಗೂ ಯಾವ ಪಕ್ಷಕ್ಕೆ ಹೋಗಬೇಕೆಂದು ತಿರ್ಮಾನಿಸಿಲ್ಲ. ಈ ಕುರಿತು ಕೋರ್ಟದಲ್ಲಿರುವ ಪ್ರಕರಣದ ತೀರ್ಪು ಬಂದ ನಂತರ ನಾವೆಲ್ಲರೂ ಸೇರಿ ಚರ್ಚಿಸಿ ಯಾವ ಪಕ್ಷದಿಂದ ಚುನಾವಣೆ ಎದುರಿಸಬೇಕೆಂದು ತಿರ್ಮಾನಿಸುತ್ತೇವೆ. ನಾವು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜಿನಾಮೆ ನೀಡಿಲ್ಲ. ಸಮ್ಮಿಶ್ರ ಸರಕಾರ ಹಾಗೂ ನಮ್ಮ ನಡುವೆ ಅಸಮಾಧಾನವಿತ್ತು. ಅದಕ್ಕಾಗಿ ನಾವು ರಾಜಿನಾಮೆ ನೀಡಿದ್ದೇವೆ ಅಷ್ಟೆ. ಅದನ್ನು ನೀವು ತಪ್ಪಾಗಿ ನಮ್ಮಿಂದಲೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಜನರ ದಾರಿ ತಪ್ಪಿಸಬೇಡಿ ಎಂದು ಮಾಧ್ಯಮದವರಿಗೆ ಹೇಳಿದರು.
ಗೋಕಾಕದ ಜಾರಕಿಹೊಳಿ ಸಹೋದರರ ಕುಟುಂಬದ ವಿಷಯ ಕುರಿತು ಯಾವುದೆ ಪ್ರತಿಕ್ರಿಯೆ ನೀಡಲ್ಲ. ಕುಂಟುಂಬದ ವಿಷಯ ಬಂದಾಗ ನಾವೆಲ್ಲ ಒಂದು, ರಾಜಕೀಯ ವಿಷಯ ಬಂದಾಗ ಬೇರೆ ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ.
ಗೋಕಾಕದ ಜಾರಕಿಹೊಳಿ ಸಹೋದರರ ಕುಟುಂಬದ ವಿಷಯ ಕುರಿತು ಯಾವುದೆ ಪ್ರತಿಕ್ರಿಯೆ ನೀಡಲ್ಲ. ಕುಂಟುಂಬದ ವಿಷಯ ಬಂದಾಗ ನಾವೆಲ್ಲ ಒಂದು, ರಾಜಕೀಯ ವಿಷಯ ಬಂದಾಗ ಬೇರೆ ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ.
ಅಭಿಮಾನಿಗಳ ಸಭೆಗೆ ಕಾಂಗ್ರೆಸ್ ಕಾರ್ಯಕರ್ತರು ಹಾಜರು
ಅನರ್ಹ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಮಹೇಶ ಕುಮಠಳ್ಳಿ ನಡೆಸಿದ ಬೆಂಬಲಿಗರ ಸಭೆಯಲ್ಲಿ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರೇ ಹಾಜರಿದ್ದರು. ಅಥಣಿ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮತ್ತ ಸೆಳೆದು ಕಾಂಗ್ರೆಸ್ ನ ಶಕ್ತಿ ಕುಗ್ಗಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ನಿಂಗಪ್ಪಾ ನಂದೇಶ್ವರ, ಪ್ರಭಾವಿ ಮುಖಂಡ ಕಿರಣಕುಮಾರ ಪಾಟೀಲ, ಮಾಜಿ ಕೊಕಟನೂರ ಬ್ಲಾಕ ಕಾಂಗ್ರೇಸ್ ಅಝಧ್ಯಕ್ಷ ಶ್ಯಾಮರಾವ್ ಪೂಜಾರಿ ಸೇರಿದಂತೆ ಬಹುತೇಕ ಕಾಂಗ್ರೇಸ್ ನ ತಾ.ಪಂ ಸದಸ್ಯರು ಹಾಗೂ ಗ್ರಾ.ಪಂ ಸದಸ್ಯರು, ಅದಲ್ಲದೆ ಹಲವಾರು ಅಭಿಮಾನಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ