Kannada NewsKarnataka News

10 ಸಾವಿರ ದಾಟಿದ ಲಕ್ಷ್ಮಿ ಹೆಬ್ಬಾಳಕರ್ ಫಾಲೋವರ್ಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದ ಮುಂಚೂಣಿ ರಾಜಕಾರಣಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಟ್ವೀಟರ್ ಫಾಲೋವರ್ಸ್ ಸಂಖ್ಯೆ 10 ಸಾವಿರ ದಾಟಿದೆ.

ಕಳೆದ ವರ್ಷವೇ ಟ್ವೀಟರ್ ನಿಂದ ಸುರಕ್ಷತೆ ಮತ್ತು ಸೆಲೆಬ್ರಿಟಿ ಸ್ಥಾನ ಪಡೆದುಕೊಂಡಿರುವ ಲಕ್ಷ್ಮಿ ಹೆಬ್ಬಾಳಕರ್ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ನಂತರದ ಸ್ಥಾನದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಇದ್ದಾರೆ. ಸುರೇಶ ಅಂಗಡಿ ಕೇಂದ್ರ ಸಚಿವರಾಗುವ ಮುನ್ನ ಕೇವಲ 600ರಷ್ಟಿದ್ದ ಟ್ವೀಟರ್ ಫಾಲೋವರ್ಸ್, ಅವರು ಕೇಂದ್ರ ಸಚಿವರಾಗುತ್ತಿದ್ದಂತೆ ದಿಢೀರ್ ಏರಿಕೆಯಾಗಿ ಈಗ 26.6 ಸಾವಿರಕ್ಕೇರಿದೆ.
ಜಿಲ್ಲೆಯಲ್ಲಿ ನಂತರದ ಸ್ಥಾನದಲ್ಲಿರುವ ಸತೀಶ ಜಾರಕಿಹೊಳಿ 6,193 ಫಾಲೋವರ್ಸ್ ಹೊಂದಿದ್ದಾರೆ. ಶಶಿಕಲಾ ಜೊಲ್ಲೆ 3,846,
ಅಂಜಲಿ ನಿಂಬಾಳ್ಕರ 3,592, ಅಭಯ ಪಾಟೀಲ 1,888, ಪಿ.ರಾಜೀವ 1,844,  ಅನಿಲ ಬೆನಕೆ 1,358 ಫಾಲೋವರ್ಸ್ ಹೊಂದಿದ್ದಾರೆ.

Related Articles

Back to top button