*ಸೈಕಲ್ ತುಳಿಯಲಿ ಬಿಡಿ… ಆರೋಗ್ಯಕ್ಕೆ ಒಳ್ಳೆಯದು: ಬಿಜೆಪಿ ಪ್ರತಿಭಟನೆಗೆ ಟಾಂಗ್ ಕೊಟ್ಟ ಸಚಿವ ಎಂ.ಬಿ ಪಾಟೀಲ್*
ಪ್ರಗತಿವಾಹಿನಿ ಸುದ್ದಿ: ಬಿಜೆಪಿಯವರು ಸೈಕಲ್ ತುಳಿಯಲಿ ಬಿಡಿ…ಆರೋಗ್ಯಕ್ಕೆ ಒಳ್ಳೆಯದು ಎಂದು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಯಕರು ಇಂದು ಸೈಕಲ್ ಜಾಥಾ ನಡೆಸಿದ ಬಗ್ಗೆ ಸಚಿವ ಎಂಬಿ ಪಾಟೀಲ್ ಅವರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾಗಿದ್ದಾಗ ಬಿಜೆಪಿ ಸರ್ಕಾರ ಪೆಟ್ರೋಲ್ ಬೆಲೆಯನ್ನು ಅಂದಾಜು ರೂ. 38, ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು ರೂ. 500 ಹೆಚ್ಚಿಸಿದ್ದರು. ಆಗ ರಾಜ್ಯ ಬಿಜೆಪಿ ನಾಯಕರೇಕೆ ಪ್ರತಿಭಟನೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ರು.
ರಾಜ್ಯದಿಂದ 25 ಬಿಜೆಪಿ ಸಂಸದರಿದ್ದರು ಕೂಡ ಲೋಕಸಭೆಯಲ್ಲಿ ಬಾಯಿ ತೆಗೆಯಲೇ ಇಲ್ಲ. ಈಗ ರೂ. 3 ಹೆಚ್ಚಿಸಿರುವುದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಏರಿಕೆಯ ನಂತರವೂ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆ ಕಡಿಮೆಯೇ ಇದೆ ಎಂದು ತಿಳಿಸಿದರು.
ಈಗ ರಾಜ್ಯ ಬಿಜೆಪಿ ನಾಯಕರು ಸೈಕಲ್ ಹೊಡೆದು ಪ್ರತಿಭಟಿಸುತ್ತಿದ್ದಾರೆ. ಅವರೆಲ್ಲಾ ಸೈಕಲ್ ತುಳಿಯಲಿ ಬಿಡಿ. ಸೈಕಲ್ ತುಳಿಯುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಸಚಿವ ಎಂ ಬಿ ಪಾಟೀಲ್ ವ್ಯಂಗ್ಯವಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ