Belagavi NewsBelgaum NewsKarnataka NewsNational

*ಮೂರು ಜೋಡಿ ಎಕ್ಸ್‌ಪ್ರೆಸ್ ರೈಲುಗಳಿಗೆ ಎಲ್‌ಎಚ್‌ಬಿ ಬೋಗಿಗಳ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೂರು ಜೋಡಿ ಎಕ್ಸ್‌ಪ್ರೆಸ್ ರೈಲುಗಳ ಹಳೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಬೋಗಿಗಳ ಬದಲಿಗೆ ಸುಧಾರಿತ ಲಿಂಕೆ ಹಾಫ್‌ಮನ್ ಬುಶ್ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ನೂತನ ಬೋಗಿಗಳು ಪ್ರಯಾಣಿಕರಿಗೆ ಹೆಚ್ಚು ಭದ್ರತೆ ಮತ್ತು ಉತ್ತಮ ಪ್ರಯಾಣದ ಅನುಭವವನ್ನು ನೀಡಲಿವೆ.

ಪರಿಷ್ಕೃತ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯನಿರ್ವಹಿಸಲಿರುವ ರೈಲುಗಳ ವಿವರ ಹೀಗಿವೆ

ರೈಲು ಸಂಖ್ಯೆ 17301 ಬೆಳಗಾವಿ – ಮೈಸೂರು ಎಕ್ಸ್‌ಪ್ರೆಸ್ ರೈಲು ಜುಲೈ 1, 2025 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.

 ರೈಲು ಸಂಖ್ಯೆ 17302 ಮೈಸೂರು – ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಜುಲೈ 4, 2025 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.

Home add -Advt

 ರೈಲು ಸಂಖ್ಯೆ 17307 ಮೈಸೂರು – ಬಾಗಲಕೋಟೆ ಎಕ್ಸ್‌ಪ್ರೆಸ್ ರೈಲು ಜುಲೈ 2, 2025 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯನಿರ್ವಹಿಸಲಿದೆ.

ರೈಲು ಸಂಖ್ಯೆ 17308 ಬಾಗಲಕೋಟೆ – ಮೈಸೂರು ಎಕ್ಸ್‌ಪ್ರೆಸ್ ರೈಲು ಜುಲೈ 3, 2025 ರಿಂದ ಹೊಸ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಚಲಿಸಲಿದೆ.

ಈ ನವೀಕೃತ ಎಲ್‌ಎಚ್‌ಬಿ ರೇಕ್‌ನ ಸಂಯೋಜನೆಯು ಈ ಕೆಳಗಿನಂತಿರುತ್ತದೆ, 2 – ಎಸಿ 2-ಟೈರ್, 6 – ಎಸಿ 3-ಟೈರ್, 7 –  ಸ್ಲೀಪರ್ ಕ್ಲಾಸ್, 4 – ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 2 – ಲಗೇಜ್/ಜನರೇಟರ್ ಕಾರ್‌ಗಳು.

ಈ ಹಿಂದೆ 22 ಬೋಗಿಗಳನ್ನು ಹೊಂದಿದ್ದ ಐಸಿಎಫ್ ರೇಕ್‌ನ ಬದಲಿಗೆ ಈಗ 21 ಹೊಸ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ಹುಬ್ಬಳ್ಳಿ ಮತ್ತು ಚೆನ್ನೈ ನಡುವಿನ ಜನಪ್ರಿಯ ರೈಲುಗಳಿಗೂ ಎಲ್‌ಎಚ್‌ಬಿ ಬೋಗಿಗಳನ್ನು ನೀಡಲಾಗುತ್ತಿದೆ:

ರೈಲು ಸಂಖ್ಯೆ 17313 ಎಸ್ಎಸ್ಎಸ್ ಹುಬ್ಬಳ್ಳಿ – ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಜುಲೈ 2, 2025 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸೇವೆ ಸಲ್ಲಿಸಲಿದೆ. ರೈಲು ಸಂಖ್ಯೆ 17314 ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಜುಲೈ 3, 2025 ರಿಂದ ನವೀಕೃತ ಎಲ್‌ಎಚ್‌ಬಿ ಬೋಗಿಗಳನ್ನು ಹೊಂದಿರಲಿದೆ.

ಈ ಎಲ್‌ಎಚ್‌ಬಿ ರೇಕ್‌ನ ಸಂಯೋಜನೆಯು ಈ ಕೆಳಗಿನಂತೆ 

1 – ಫಸ್ಟ್ ಕ್ಲಾಸ್ ಎಸಿ, 2 – ಎಸಿ 2-ಟೈರ್, 3 – ಎಸಿ 3-ಟೈರ್, 6 – ಸ್ಲೀಪರ್ ಕ್ಲಾಸ್, 4 – ಜನರಲ್ ಕ್ಲಾಸ್ ಬೋಗಿಗಳು,1 – ಲಗೇಜ್/ಜನರೇಟರ್ ಕಾರ್,1 – ಸೆಕೆಂಡ್ ಕ್ಲಾಸ್ ಲಗೇಜ್/ವಿಕಲಚೇತನರ ಕೋಚ್,1 – ಎಸಿ ಪ್ಯಾಂಟ್ರಿ ಕಾರ್.

ಈ ಹಿಂದೆ 21 ಬೋಗಿಗಳನ್ನು ಹೊಂದಿದ್ದ ಐಸಿಎಫ್ ರೇಕ್‌ನ ಬದಲಿಗೆ ಈಗ 19 ಹೊಸ ಎಲ್‌ಎಚ್‌ಬಿ ರೇಕ್‌ಗಳನ್ನು ಅಳವಡಿಸಲಾಗಿದೆ.

Related Articles

Back to top button