Kannada NewsKarnataka NewsNationalPolitics

*ಭಾರತೀಯ ಸೇನೆಯ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ನೇಮಕ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಪ್ರಸ್ತುತ ವೈಸ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಅವರು ನೇಮಕಗೊಂಡಿದ್ದಾರೆ. 

ಈಗಿನ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಜೂನ್ 30 ರಂದು ನಿವೃತ್ತಿ ಹೊಂದಲಿದ್ದು, ಅವರ ಸ್ಥಾನಕ್ಕೆ ಧೀರಜ್ ಸೇಥ್ ಬರಲಿದ್ದಾರೆ. ಈ ಮಹತ್ವದ ನೇಮಕಾತಿಗೆ ಭಾರತದ ರಾಷ್ಟ್ರಪತಿಯವರು ಅನುಮೋದನೆ ನೀಡಿದ್ದು, ಶನಿವಾರ ರಕ್ಷಣಾ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ. 

Home add -Advt

ಜೂನ್ 30 ರಿಂದ ಜಾರಿಗೆ ಬರುವಂತೆ ಅವರು ‘ಜನರಲ್ ಹುದ್ದೆಯನ್ನು ಅಲಂಕರಿಸಲಿದ್ದು, ಆಗಸ್ಟ್ 31, 2028 ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಅವರು ಭಾರತೀಯ ಸೇನೆಯಲ್ಲಿ ಸುದೀರ್ಘ ಹಾಗೂ ಅತ್ಯಂತ ಅನುಭವದ ಹಿನ್ನೆಲೆ ಹೊಂದಿದ್ದಾರೆ. ಸದ್ಯ ವೈಸ್ ಚೀಫ್ ಆಗಿರುವ ಅವರು, ಇದಕ್ಕೂ ಮುನ್ನ ಸೇನೆಯ ಅತ್ಯಂತ ಪ್ರಮುಖ ಕಾರ್ಯಾಚರಣೆಯ ವಿಭಾಗವಾದ ‘ಸದರ್ನ್ ಕಮಾಂಡ್‌ನ ಮುಖ್ಯಸ್ಥರಾಗಿದ್ದರು.

Related Articles

Back to top button