Kannada NewsKarnataka NewsLatest

ಪೊಲೀಸ್ ಲಿಖಿತ ಪರೀಕ್ಷೆ: ಅಭ್ಯರ್ಥಿಗಳಿಗೆ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸೆ.20ರಂದು ನಡೆಯಲಿರುವ ಪೊಲೀಸ್ ಕಾನ್ಸ್ಟೆಬಲ್  ಹುದ್ದೆಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ  ತ್ಯಾಗರಾಜನ್ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಯಿಂದ 12.30ರ ವರೆಗೆ ಪೊಲೀಸ್ ಸಿವ್ಹಿಲ್ ಕಾನ್ಸ್‌ಟೇಬಲ್ (ಸಿವ್ಹಿಲ್) (ಪುರುಷ & ಮಹಿಳಾ) 2007 ಮತ್ತು ಪೊಲೀಸ್ ಕಾನ್ಸ್‌ಟೇಬಲ್ (ಕಲ್ಯಾಣ ಕರ್ನಾಟಕ) (ಪುರುಷ & ಮಹಿಳಾ) ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬೆಳಗಾವಿ ನಗರದ 32 ಶಾಲಾ, ಕಾಲೇಜುಗಳಲ್ಲಿ ನಡೆಯಲಿದೆ.

Home add -Advt

ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಒಂದೂವರೆ ಘಂಟೆ ಮುಂಚಿತವಾಗಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಲಿಖಿತ ಪರೀಕ್ಷೆಗೆ ಬರುವವರು ಪ್ರವೇಶ ಪತ್ರದಲ್ಲಿ ತಿಳಿಸಿದ ಯಾವುದಾದರೊಂದು ಮೂಲ ಗುರುತಿನ ಚೀಟಿ (ಐಡಿ) ಯೊಂದಿಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು.

ನಕಲು ಪ್ರತಿ ಅಥವಾ ಸ್ಕ್ಯಾನ್ ಮಾಡಿರುವ ಪ್ರತಿಯನ್ನು ಅನುಮತಿಸಲಾಗುವುದಿಲ್ಲ.
ಕೋವಿಡ್-೧೯ (ಕರೋನಾ ವೈರಾಣು) ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರತಕ್ಕದ್ದು ಎಂದು ಸೂಚಿಸಲಾಗಿದೆ.

Related Articles

Back to top button