LatestUncategorized

*ಶಿಕ್ಷಣ ಇಲಾಖೆಯಿಂದ ಹೊಸ ಮಾನದಂಡ; ಮಹತ್ವದ ಸುತ್ತೋಲೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪ್ರವೇಶ ಪಡೆಯುವ ಮಕ್ಕಳು ಎಲ್ ಕೆಜಿ ಸೇರಲು ಜೂನ್1ಕ್ಕೆ 4 ವರ್ಷವಾಗಿರಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

2025-26ರ ವೇಳೆಗೆ ಈ ಮಕ್ಕಳು 6 ವರ್ಷ ವಯಸ್ಸಿನವರಾಗಿರುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಹೊಸ ವಯಸ್ಸಿನ ಮಾನದಂಡ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ವ್ಯವಸ್ಥೆಯಲ್ಲಿ ಮಕ್ಕಳು 5 ವರ್ಷ ಮತ್ತು 10 ತಿಂಗಳು ದಾಟಿದರೆ 1ನೇ ತರಗತಿಗೆ ಸೇರಲು ಅನುಮತಿ ನೀಡಲಾಗುತ್ತದೆ.

Home add -Advt

ಜೂನ್ 2022ರಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಿಕ್ಷಣ ಹಕ್ಕು ನಿಯಮಗಳಿಗೆ ಅನುಗುಣವಾಗಿ ಹೊಸ ವಯಸ್ಸಿನ ಮಾನದಂಡಗಳನ್ನು ಬದಲಾಯಿಸುವುದಾಗಿ ಘೋಷಿಸಿತ್ತು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್ ಕೆಜಿ ಪ್ರವೇಶ ಪಡೆಯಲು ಮಕ್ಕಳು ಕಡ್ಡಾಯವಾಗಿ ಜೂನ್ ರ ವೇಳೆಗೆ 4ನೇ ವರ್ಷಕ್ಕೆ ಕಾಲಿಟ್ಟಿರಬೇಕು. 2025-26ರಿಂದ 1ನೇ ತರಗತಿಗೆ ವಯಸ್ಸಿನ ಮಾನದಂಡ ಜಾರಿಗೆ ತರಲು ಈ ವರ್ಷದಿಂದ ಎಲ್ ಕೆಜಿ ಗೆ ಈ ನಿಯಮ ಅನ್ವಯಿಸಲಾಗುತ್ತಿದೆ ಎಂದು ತಿಳಿಸಿದೆ.

https://pragati.taskdun.com/mp-sumalatacongress-workersapologynagamangala/


Related Articles

Back to top button