Latest

ಇದು ಕಾಂಗ್ರೆಸ್ ಪ್ರಾಯೋಜಿತ ನಾಟಕ ಎಂಬುದರಲ್ಲಿ ಅನುಮಾನವಿಲ್ಲ – BJP

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ವಿದ್ಯಾರ್ಥಿಗಳಲ್ಲಿ ಮತೀಯವಾದವನ್ನು ಬಲವಂತವಾಗಿ ಹೇರುವ ಮೂಲಭೂತವಾದಿಗಳ ಹತಾಶೆಯ ಹೇಳಿಕೆ ಹಿಜಾಬ್ ವಿವಾದದ ಹಿಂದಿದೆ ಎಂದು ಹೇಳಿದೆ.

ರಾಹುಲ್ ಗಾಂಧಿಯಂತಹ ವಿಫಲ ನಾಯಕರು ಕೂಡ ಇದನ್ನು ಬೆಂಬಲಿಸುತ್ತಾರೆ ಎಂದರೆ ಇದು ಕಾಂಗ್ರೆಸ್ ಪ್ರಾಯೋಜಿತ ನಾಟಕ ಎಂಬುದರಲ್ಲಿ ಅನುಮಾನವಿದೆಯೇ? ಎಂದು ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.

Home add -Advt

ಕಾಂಗ್ರೆಸ್ ಕರಾವಳಿ ನಾಯಕರು ಹಿಜಾಬ್ ಗಿಂತ ನಮಗೆ ರಾಜಕೀಯ ಭವಿಷ್ಯ ಮುಖ್ಯ ಎನ್ನುತ್ತಾರೆ. ಆದರೆ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರ ನಾಯಕರು ಹಿಜಾಬ್ ಪರ ವಕಾಲತ್ತು ವಹಿಸುತ್ತಾರೆ. ಕಾಂಗ್ರೆಸ್ಸಿಗರೇ ಇಂತಹ ದಾರಿ ತಪ್ಪಿಸುವ ಪ್ರಯತ್ನವೇಕೆ? ಆರಂಭದಲ್ಲಿ ಕೇವಲ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದು, ಸಮವಸ್ತ್ರ ನಿಯಮ ಉಲ್ಲಂಘಿಸಿದರು. ಇವರಿಗೆ ಪ್ರಚೋದನೆ ನೀಡಿದ ಪರಿಣಾಮ ಈಗ ಇಡೀ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿವಾದ ಹಬ್ಬಿದೆ. ಸಿದ್ದರಾಮಯ್ಯ ಅವರ ಹಿಜಾಬ್ ಮೂಲಭೂತ ಹಕ್ಕು ಎಂಬ ಪ್ರಚೋದನೆಯೇ ಇದಕ್ಕೆ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ.

1983ರ ಶಿಕ್ಷಣ ಕಾಯ್ದೆ ಪ್ರಕಾರ ರಾಜ್ಯದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಆದರೆ ಸಿದರಾಮಯ್ಯ ಅವರು ಹಿಜಾಬ್ ಒಳಗಿರುವ ಮತ ಪಡೆಯಲು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎನ್ನುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಅವಾಂತರಗಳಿಗೆ ಸಿದ್ದರಾಮಯ್ಯಾವರೇ ನೇರ ಹೊಣೆಗಾರರು ಎಂದು ಕಿಡಿಕಾರಿದೆ.

ಮೂಲಭೂತವಾದಿಗಳಿಗೆ ಸಂವಿಧಾನದ ಗುರಾಣಿ ಕೊಡುವ ಸಿದ್ದರಾಮಯ್ಯನವರಿಗೆ ಸಂವಿಧಾನದ 25ನೇ ವಿಧಿಯ 2(ಎ), 2(ಬಿ),2(ಬಿ) ಏನು ಹೇಳುತ್ತದೆ ಎಂಬುದು ತಿಳಿಯದಾದು ವಿಪರ್ಯಾಸ. ಶಾಂತಿಭಂಗ, ಸಾರ್ವಭೌಮತೆಗೆ ಧಕ್ಕೆಯಾದಾಗ ಸರ್ಕಾರಕ್ಕೆ ಧಾರ್ಮಿಕ ಹಕ್ಕನ್ನು ನಿರ್ಬಂಧಿಸುವ ಅಧಿಕಾರವೂ ಇದೆ. ಇದು ಶಾಂತಿಭಂಗ ಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದೆ.
ತಾರಕಕ್ಕೇರಿದ ಹಿಜಾಬ್ V/S ಕೇಸರಿ ಶಾಲು ವಿವಾದ; ಉಡುಪಿ ಎಂಜಿಎಂ ಕಾಲೇಜು ರಣಾಂಗಣ

Related Articles

Back to top button