Kannada NewsKarnataka NewsLatest

*ಭೀಕರ ಅಪಘಾತಕ್ಕೆ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ; ಹಾಸನ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಬಿ.ಕಾಟಿಹಳ್ಲಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ತಾಯಿ ಕಮಲಮ್ಮ (70) ಹಾಗೂ ಮಗ ಸತೀಶ್ (40) ಮೃತ ದುರ್ದೈವಿಗಳು. ಅಪಘಾತದ ಭೀಕರತೆಗೆ ಬೈಕ್ ನಲ್ಲಿದ್ದ ತಾಯಿ ಹಾಗೂ ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಈ ಭಾಗದಲ್ಲಿ ಲಾರಿಗಳು ವೇಗವಾಗಿ ಬರುತ್ತವೆ. ಲಾರಿಗಳಿಗೆ ಹಲವು ಜೀವಗಳು ಬಲಿಯಾಗಿವೆ. ಇಂದು ಅಪಘಾತ ನಡೆದು ತಾಯಿ-ಮಗ ಸಾವನ್ನಪ್ಪಿದ್ದರೂ ಈವರೆಗೂ ಘಟನಾ ಸ್ಥಳಕ್ಕೆ ಪೊಲೀಸರಾಗಲಿ ಯಾರೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದ ಬೆನ್ನಲ್ಲೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Related Articles

Back to top button