Kannada NewsKarnataka NewsNationalPolitics

*ಯುದ್ಧ ಮುಗಿದ ಬಳಿಕ ಎಲ್‌ಪಿಜಿ ಬೆಲೆ ಕಡಿಮೆ ಆಗಲಿದೆ: ಪ್ರಲ್ಲಾದ್ ಜೋಶಿ*

ಪ್ರಗತಿವಾಹಿನಿ ಸುದ್ದಿ: ವಿಶ್ವದಾದ್ಯಂತ ಎದುರಾಗಿರುವ ಇಂಧನ ಬಿಕ್ಕಟ್ಟಿನಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿಗಳಿಗೆ ಅನುಗುಣವಾಗಿ ತೈಲ ಕಂಪನಿಗಳು ಎಲ್‌ಪಿಜಿ ಬೆಲೆ ಏರಿಕೆ ಮಾಡಿವೆ. ಆದರೆ, ಪ್ರಸ್ತುತ ನಡೆಯುತ್ತಿರುವ ಯುದ್ಧಗಳು ಕೊನೆಗೊಂಡ ನಂತರ ಬೆಲೆಗಳು ಮತ್ತೆ ಇಳಿಕೆಯಾಗಲಿವೆ ಎಂದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಅಗತ್ಯವಿರುವ ಸುಮಾರು ಶೇಕಡಾ 50ರಷ್ಟು ಇಂಧನವು ವಿದೇಶಗಳಿಂದ ಆಮದಾಗುತ್ತದೆ. ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಪೂರೈಕೆಯಾಗುತ್ತಿದ್ದು ಅಲ್ಲಿ ಉಂಟಾಗಿರುವ ತೊಂದರೆಗಳಿಂದಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಯುಪಿಎ ಸರ್ಕಾರದ ಅವಧಿಯ ನಿರ್ಧಾರಗಳನ್ನು ಟೀಕಿಸಿದ ಜೋಶಿ, “2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಇಂಧನ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಕಂಪನಿಗಳಿಗೆ ನೀಡಿದೆ. ಈಗ ಕಂಪನಿಗಳು ಆ ಅಧಿಕಾರ ಬಳಸಿ ಬೆಲೆ ಹೆಚ್ಚಿಸುತ್ತಿವೆ. ಆದರೂ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಹೊರೆಯಾಗದಂತೆ ಗಮನಹರಿಸುತ್ತಿದೆ” ಎಂದರು.

Related Articles

Back to top button