GIT add 2024-1
Laxmi Tai add
Beereshwara 33

*ಮಹಾಬಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಸಹ್ಯಾದ್ರಿ ನಗರದಲ್ಲಿರುವ ಶ್ರೀ ಮಹಾಬಳೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ, ಉದ್ಯಾನವನ ಹಾಗೂ ಬೊರವೆಲ್ ಹಾಕಿಸುವ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್
ಭೂಮಿ ಪೂಜೆ ನೆರವೇರಿಸಿದರು.

ಮಹಾ ಶಿವರಾತ್ರಿಯ ಪ್ರಯುಕ್ತ ಮಹಾಬಳೇಶ್ವರ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ಸಚಿವರು, ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.

Emergency Service

ಈ ವೇಳೆ ಅರ್ಚಕರಾದ ಅಡವಯ್ಯ ಹಿರೇಮಠ್, ವಿಜಯ ಹಿರೇಮಠ್, ಮಹಾಬಲೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಅಣ್ಣಯ್ಯ ಪಾಟೀಲ, ರಾಜು ಡೂಗನವರ, ಸುರೇಶ್ ಘೋರ್ಪಡೆ, ಸಂಜು ಅಂಗಡಿ, ಗೋಪಾಲ ಪಂಚಾಳ, ಹರೀಶ್ ಹಂಡೆ, ಮಲ್ಲಪ್ಪಾ ಮಾಕಿ, ಗುರುಸಿದ್ದ ಪಾಟೀಲ, ಅಡವಯ್ಯ ಸ್ವಾಮಿಗಳು, ರತ್ನಾ ಕುಲಕರ್ಣಿ, ಸುರಭಿ ಜಡಗಿ, ರಾಜಶ್ರೀ, ಅಶ್ವಿನಿ ಹಾವನ್ನಗೋಳ, ಸ್ನೇಹಾ ಪಾಟೀಲ ಉಪಸ್ಥಿತರಿದ್ದರು.

ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಮಹಾ ಶಿವರಾತ್ರಿಯ ಪ್ರಯುಕ್ತ ಬೆಳಗಾವಿಯ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಶಿವಾಲಯದಲ್ಲಿ,
ಜಯನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಾಗೂ ಕಪಿಲೇಶ್ವರ ಮಂದಿರದಲ್ಲಿ ಶಿವನ ಮೂರ್ತಿಗೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

Bottom Add3
Bottom Ad 2