Belagavi NewsBelgaum News

*ಮಹದಾಯಿ ವಿವಾದ: ಬೆಳಗಾವಿಯ ಕಣಕಂಬಿಗೆ ಭೇಟಿ ನೀಡಿದ ಕೇಂದ್ರ ತಂಡ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ನಡುವಿನ ಮಹದಾಯಿ ಜಲ ವಿವಾದ ಬಗೆಹರಿಯುವ ಲಕ್ಷನಗಕು ಕಾಣುತ್ತಿಲ್ಲ. ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರ ತಂಡ ರಚಿಸಲಾಗಿದ್ದು, ಇಂದು ಕೇಂದ್ರ ತಂಡ ಬೆಳಗಾವಿಯ ಕಣಕಂಬಿಗೆ ಭೇಟಿ ನೀಡಿದೆ.

ಕೇಂದ್ರದಿಂದ ಪರಿಸರ ಇಲಕಹೆ ಅನುಮತಿ ಸಿಒಗದಂತೆ ನೋಡಿಕೊಲ್ಳಲು ಗೋವಾ ಸರ್ಕಾರ ಕುತಂತ್ರ ಮಾಡಿದೆ ಎನ್ನಲಾಗಿದೆ. ಇದರ ಭಾಗವಾಗಿಯೇ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ ತಂಡ ಭೇಟಿ ನೀಡಿದೆ.

ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಅಧಿಕಾರಿಗಳನ್ನು ಒಳಗೊಂಡ ಸದಸ್ಯರ ತಂಡ ಬೆಳಗವೈ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕಂಬಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳಸಾ ಮತ್ತು ಬುಂಡೂರಿ ನಾಲೆ ಉಗಮ ಸ್ಥಾನಕ್ಕೆ ಭೇಟಿ ನೀಡಿ ಎರಡು ನಾಲೆಗಳ್ ನೀರಿನ ಹರಿವು ಹಾಗೂ ಮಹದಾಯಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button