*ಹೆಚ್ಚುವರಿ ಪೊಲೀಸ್ ಠಾಣೆಗಳ ಸ್ಥಾಪಗೆ ಐಜಿಗೆ ಮನವಿ ಸಲ್ಲಿಸಿದ ಮಹಾಂತೇಶ್ ಕಡಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಗೋಕಾಕ ನಗರಕ್ಕೆ ಆಗಮಿಸಿದ್ದ ಉತ್ತರ ವಲಯದ ಐಜಿಪಿ ಚೇತನಸಿಂಗ್ ರಾಠೋಡ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರನ್ನು ಡಾ. ಮಹಾಂತೇಶ ಕಡಾಡಿಯವರು ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಿದರು.
ಗೋಕಾಕ ಶಹರ ಪೋಲಿಸ್ ಠಾಣೆ ಹಾಗೂ ಗ್ರಾಮೀಣ ಪೋಲಿಸ್ ಠಾಣೆ ಸಿಬ್ಬಂದಿಗಳಿಗೆ ಅವಶ್ಯವಿರುವ ಹಾಗೂ ತಮ್ಮ ಕರ್ತವ್ಯ ನಿರ್ವಹಿಸಲು ಅನಾನುಕೂಲ ಆಗುತ್ತಿರುವ ಹಿನ್ನೆಲೆಯಲ್ಲಿ ಪೋಲಿಸ್ ವಸತಿ ಗೃಹಗಳನ್ನು ನಿರ್ಮಿಸಲು ಹಾಗೂ ಗೋಕಾಕ ನಗರದಲ್ಲಿ ಟ್ರಾಫಿಕ ಪೋಲಿಸ್ ಠಾಣೆ ಮತ್ತು ಖನಗಾಂವ ಗ್ರಾಮದಲ್ಲಿ ಪೋಲಿಸ್ ಹೊರ ಠಾಣೆ ನಿರ್ಮಿಸಲು ಮನವಿ ಸಲ್ಲಿಸಿದರು.
ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಬ್ಬಂದಿ ಕೊರತೆ ಇದ್ದು ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಹೊಸದಾಗಿ ಗ್ರಾಮೀಣ ಠಾಣೆಗೆ ಹೆಚ್ಚುವರಿಯಾಗಿ 1 ಪಿಎಸ್ಐ ಹಾಗೂ 20 ಪಿಸಿಗಳನ್ನು ಹಾಗೂ ಶಹರ ಪೋಲಿಸ್ ಠಾಣೆಗೆ 1 ಪಿಐ ಹುದ್ದೆ, 15 ಪಿಸಿ ಹುದ್ದೆಗಳನ್ನು ಮಂಜೂರು ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಐಜಿಪಿ ಮತ್ತು ಎಸ್ಪಿ ರವರು ಇದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶಿಘ್ರದಲ್ಲಿ ಮಂಜೂರು ಮಾಡಲಾಗುವುದೆಂದು ತಿಳಿಸಿದರು.