
ಪ್ರಗತಿವಾಹಿನಿ ಸುದ್ದಿ; ನಾಗ್ಪುರ: ಟ್ರಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 6 ಜನರು ಸಾವನ್ನಪ್ಪಿರುವ ಘ್ಟನೆ ಮಹಾರಾಷ್ಟ್ರದ ನಾಗ್ಪುರದ ಸೋನ್ ಖಾಂಬ್ ಗ್ರಾಮದಲ್ಲಿ ನಡೆದಿದೆ.
ಕಾರಿನಲ್ಲಿ 7 ಜನರು ಪ್ರಯಾಣಿಸುತ್ತಿದ್ದರು. ಮದುವೆ ಸಮಾರಂಭದಿಂದ ವಾಪಾಸ್ ಆಗುತಿದ್ದಾಗ ಈ ದುರಂತ ಸಂಭವಿಸಿದೆ. ಮೃತರನ್ನು ಅಜಯ್ ದಶರತ್ (45), ವಿಠಲ್ ದಿಂಗಂಬರ್ ತೋಟೆ (45), ಸುಧಾಕರ್ ರಾಮಚಂದ್ರ ಮಾನಕರ್(42), ರಮೇಶ್ ಓಂಕಾರ್(48), ಮಯೂರ್ ಮೂರೇಶ್ವರ್ ಇಂಗ್ಲೆ (26), ವೈಭವ್ (32) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ನಾಗ್ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ