Kannada NewsKarnataka NewsLatest

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ವಿದ್ಯುತ್ ತಂತಿ ತಗುಲಿ ವೃದ್ಧ ಸಾವು

ಪ್ರಗತಿ ವಾಹಿನಿ ಸುದ್ದಿ, ಕಾಗವಾಡ: ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಶಾಕ್ ಹೊಡೆದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಮೋಳೆ ಗ್ರಾಮದ ಸತ್ಯಪ್ಪ ರಾಮು ಮುಂಜೆ ( 58) ಮೃತ ದುರ್ದೈವಿ. ಇವರು ಗ್ರಾಮದ ಜ್ಞಾನೇಶ್ವರ ದತ್ತು ಕೋಳೆಕಾರ ಎಂಬುವವರ ಜಮೀನಿನ ಮೂಲಕ ತೆರಳುತ್ತಿದ್ದಾಗ ಕಂಬದಿಂದ ಹರಿದುಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದು ಮೃತಪಟ್ಟಿದ್ದಾರೆ.

ಅವಘಡಕ್ಕೆ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಐನಾಪುರ ಹೆಸ್ಕಾಂ ಶಾಖಾಧಿಖಾರಿ ವಿಜಯ ಮಹಾಂತೇಶ ಸವದಿ , ಶಾಖೆ ಪವರ್ ಮನ್  ಮೌನೇಶ ಬಡಿಗೇರ ವಿರುದ್ಧ ಕಾಗವಾಡ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಅಂಗನವಾಡಿ ಸಹಾಯಕಿ ಅನುಮಾಸ್ಪದ ಸಾವು

Related Articles

Back to top button