Latest

ಯು ಆರ್ ದ ವರ್ಸ್ಟ್ ಪರ್ಸನ್; ಸ್ಯಾಡಿಸ್ಟ್; ಪತಿ ವಿರುದ್ಧ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಪತ್ನಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ಪತಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳದೇ ಹಲವು ಯುವತಿಯರೊಂದಿಗೆ ಪ್ರೀತಿ, ಪ್ರೇಮದ ಹೆಸರಲ್ಲಿ ಅಕ್ರಮ ಸಂಬಂಧ ಹೊಂದಿರುವುದಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಗಾಯತ್ರಿ ನಗರದಲ್ಲಿ ನಡೆದಿದೆ.

ಎರಡು ವರ್ಷದ ಪ್ರೀತಿ, 9 ತಿಂಗಳ ದಾಂಪತ್ಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಪತಿ ರಾಕೇಶ್ ವಿರುದ್ಧ ಡೆತ್ ನೋಟ್ ಬರೆದಿಟ್ಟಿರುವ ಪತ್ನಿ ವಿಂದ್ಯಾಶ್ರೀ ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾಳೆ.

ಮದುವೆಯಾದಾಗಿನಿಂದ ಒಂದೇ ಒಂದು ದಿನವೂ ತನ್ನನ್ನು ಚೆನ್ನಾಗಿ ನೋಡಿಕೊಂಡಿಲ್ಲ. ಎಷ್ಟೇ ಬುದ್ಧಿ ಹೇಳಿದರೂ ಕೇಳದೇ ಕಂಡ ಕಂಡ ಯುವತಿಯರೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದು, ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿದ್ದಾರೆ.

ಅಲ್ಲದೇ ಯು ಆರ್ ಎ ಸ್ಯಾಡಿಸ್ಟ್ ಆಂಡ್ ಸೈಕೋ, ಯು ಆರ್ ದ ವರ್ಸ್ಟ್ ಪರ್ಸನ್ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದು, ವಿಂದ್ಯಾಶ್ರೀ ನೇಣಿಗೆ ಶರಣಾಗಿದ್ದಾಳೆ. ವಿಂದ್ಯಾಶ್ರೀ ತಂದೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಿರುವಿನಲ್ಲಿ ಪಲ್ಟಿಯಾದ ಬಸ್; 8 ಪ್ರಯಾಣಿಕರ ದುರ್ಮರಣ

Related Articles

Back to top button