Latest

ವಾವ್ಹ್, ಯುವತಿಯ ಧೈರ್ಯ ನೋಡಿ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಾಮುಕನೊಬ್ಬ ಕಿರುಕುಳ ನೀಡಿದ್ದು, ಬಸ್ ನಲ್ಲಿದ್ದವರು ತನ್ನ ಸಹಾಯಕ್ಕೂ ಬಾರದೇ ಅಮಾನವೀಯತೆ ಮೆರೆದ ಘಟನೆ ಬಗ್ಗೆ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾಳೆ.

ಅಕ್ಕ-ತಂಗಿಯಂದಿರೇ ಬೀದಿ ಕಾಮಣ್ಣರಿಂದ ಜಾಗೃತರಾಗಿರಿ ಎಂದು ಯುವತಿ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ದೇರಳಕಟ್ಟೆಯಿಂದ ಪಂಪ್ ವೆಲ್ ಗೆ ಬರುತ್ತಿದ್ದ ಮಹೇಶ್ ಎಂಬ ಹೆಸರಿನ ಬಸ್ ನಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.

Home add -Advt

ಜನವರಿ 14ರಂದು ಮಧ್ಯಾಹ್ನ 3:45ರ ಸುಮಾರಿಗೆ ಮಹೇಶ್ ಬಸ್ ನಲ್ಲಿ ನಾನು ದೇರಳಕಟ್ಟೆಯಿಂದ ಪಂಪ್ ವೆಲ್ ಕಡೆಗೆ ಬರುತ್ತಿದ್ದೆ. ಈ ವೇಳೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮುಂಭಾಗ ವ್ಯಕ್ತಿಯೊಬ್ಬ ಬಸ್ ಹತ್ತಿ ಬಂದು ನನ್ನ ಸೀಟ್ ನಲ್ಲಿ ಕುಳಿತ. ಫೋನ್ ನಲ್ಲಿ ಮಾತನಾಡುವ ನಾಟಕವಾಡಿ ನನ್ನ ದೇಹವನ್ನು ಸ್ಪರ್ಶಿಸುತ್ತಿದ್ದ. ಇದು ಹೆಚ್ಚುತ್ತಿದ್ದಂತೆ ನಾನು ಆತನನ್ನು ತರಾಟೆಗೆ ತೆಗೆದುಕೊಂಡೆ. ಹೀಗಾಗಿ ಆತ ಕ್ಷಮೆ ಕೇಳಿ ಹಿಂದಿನ ಸೀಟ್ ನಲ್ಲಿ ಕುಳಿತ. ಮೂರು ಸ್ಟಾಪ್ ಕಳೆದ ಬಳಿಕ ವ್ಯಕ್ತಿ ಮತ್ತೆ ನನ್ನ ಬಳಿ ಬಂದು ಕುಳಿತು ಮತ್ತೆ ನನ್ನ ಮುಟ್ಟುವ ಪ್ರಯತ್ನ ಮಾಡಿದ ಇದರಿಂದ ಆಕ್ರೋಶಗೊಂಡ ನಾನು ಬಸ್ ನಲ್ಲಿ ಗಲಾಟೆ ಮಾಡಿದೆ.

ನಿನ್ನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದೆ. ಅದಕ್ಕೆ ಆತ ಮುಖಕ್ಕಿದ್ದ ಮಾಸ್ಕ್ ತೆಗೆದು ಫೋಸ್ ನೀಡಿದ. ಇಷ್ಟಾದರೂ ಬಸ್ ನಲ್ಲಿದ್ದ ಯಾರೊಬ್ಬರೂ ತನ್ನ ಸಹಾಯಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಯುವತಿ ಉಳ್ಳಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

(ಇದನ್ನು ಎಲ್ಲ ಮಹಿಳೆಯರಿಗೂ ಶೇರ್ ಮಾಡಿ)

Related Articles

Back to top button