ಜೈನ್ ಬೋರ್ಡಿಂಗ್ ಅಧ್ಯಕ್ಷರಾಗಿ ಪುಷ್ಪಕ ಹನಮಣ್ಣವರ ಹಾಗೂ ಕಾರ್ಯದರ್ಶಿಯಾಗಿ ಸನ್ಮತಿ ಕಸ್ತೂರಿ ಆಯ್ಕೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದಕ್ಷಿಣ ಭಾರತ ಜೈನ ಸಭೆಯ ಶಾಖೆ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ನ ನೂತನ ಆಡಳಿತ ಮಂಡಳಿಯ ಸದಸ್ಯರು ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ನಡೆಯಿತು.
ದಕ್ಷಿಣ ಭಾರತ ಜೈನ್ ಸಭೆಯ ಅಧ್ಯಕ್ಷರಾದ ರಾವಸಾಹೇಬ ಪಾಟೀಲ ದಾದಾ ಅವರ ಮಾರ್ಗದರ್ಶನದಂತೆ ಹಾಗೂ ಸಭೆಯ ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಜೈನ್ ಬೋರ್ಡಿಂಗ್ ನ ನೂತನ ಅಧ್ಯಕ್ಷರಾಗಿ ಪುಷ್ಪಕ ಹನಮಣ್ಣವರ, ಉಪಾಧ್ಯಕ್ಷರಾಗಿ ನ್ಯಾಯವಾದಿ ಸಂಜಯ ಕುಚನೂರೆ, ಕಾರ್ಯದರ್ಶಿಯಾಗಿ ಸನ್ಮತಿ ಕಸ್ತೂರಿ, ಜಂಟಿ ಕಾರ್ಯದರ್ಶಿಯಾಗಿ ಯಲ್ಲಪ್ಪ ಮೇಲಿನಮನಿ, ಅಧಿಕ್ಷಕರಾಗಿ ಅಶೋಕ ಗುಮಾಜ, ಜಂಟಿ ಅಧಿಕಕ್ಷಿಯಾಗಿ ಡಾ. ಭಾರತಿ ಸವದತ್ತಿ ಇವರು ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಕುಂತಿನಾಥ ಎಸ್. ಕಲಮನಿ, ಭೂಷಣ ಬಿ.ಮಿರ್ಜಿ, ಅಭಿನಂದನ ಎಸ. ಜಾಬನ್ನವರ, ಅಪ್ಪಾಸಾಹೇಬ ಕಟಗೆನ್ನವರ, ಪದ್ಮಜಾ ಆರ್. ಪಾಟೀಲ, ಜಿತೇಂದ್ರ ಎಸ. ಅಗಸಿಮನಿ, ಬೊಮ್ಮನ್ನಾ ಚೌಗುಲೆ , ಅಶೋಕ ಕೆ.ಭೆಂಡಿಗೇರಿ, ಹೇಮಂತ ಬಿ.ಲಠ್ಠೆ, ಸುಭಾಷ ಕೆ.ಬೆಲೆ, ರತನ ಪಿ. ರಾಮಗೊಂಡಾ,ನಿತೀನ ಎಮ. ಚಿಪ್ರೆ, ನಾಗರಾಜ ಹುಂಡೆಕರ, ಬಾಹುಬಲಿ ಡಿ.ಪಾಟೀಲ, ನಿತೀನ ಎ.ಸೋಲಕನಪಾಟೀಲ, ವಿನಯಕುಮಾರ ಬಿ.ಬಾಳಿಕಾಯಿ, ಸಂಜೀವಕುಮಾರ ಬಿ.ಜನಗೌಡಾ, ಶೋಭಾ ಪಾಟೀಲ, ರಾಜೇಂದ್ರ ಜಿ.ಜಕ್ಕನ್ನವರ, ಪ್ರಮೋದ ಎಮ. ಪಾಟೀಲ, ಸಂತೋಷ ಜೆ. ಭಾಂವಿ, ಅಶೋಕ ಪಿ.ಧನವಾಡೆ, ಸುರೇಖಾ ಎ.ಗೌರಗೊಂಡಾ, ರೇವತಿ ಎಸ.ಅಡಿಕೆ, ಆಮಂತ್ರಿತ ಸದಸ್ಯರಾಗಿ ಆನಂದ ಎಸ.ಸದಲಗೆ, ತ್ರೀಶಲಾ ಎಸ. ಬಾಗಿ ಇವರು ಆಯ್ಕೆಯಾಗಿದ್ದಾರೆ.
ಈ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ದಕ್ಷಿಣ ಭಾರತ ಜೈನ ಸಭೆಯ ಹಿರಿಯ ಉಪಾಧ್ಯಕ್ಷ ಭಾಲಚಂದ್ರ ಪಾಟೀಲ, ಮುಖ್ಯಮಹಾಮಂತ್ರಿ ಡಾ.ಅಜೀತ ಪಾಟೀಲ, ಉಪಾಧ್ಯಕ್ಷ ದತ್ತಾ ಡೋರ್ಲೆ , ಬೆಳಗಾವಿ ವಿಭಾಗದ ಟ್ರಸ್ಟಿ ಅಶೋಕ ಜೈನ , ಬೆಳಗಾವಿ ವಿಭಾಗದ ಮಹಾಮಂತ್ರಿ ಡಾ.ರಾವಸಾಹೇಬ ಕುನ್ನೂರೆ, ಮಹಿಳಾ ಮಹಾಮಂತ್ರಿ ಸೌ ಅನಿತಾ ರಾಜು ಪಾಟೀಲ , ನಿರೀಕ್ಷಕ ಡಾ. ಎ.ಆರ್. ರೊಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಸಂಜಯ ಕುಚನೂರೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂತಿನಾಥ ಕಲಮನಿ ಕಾರ್ಯಕ್ರಮ ನಿರೂಪಿಸಿದರು.
ಕೆಎಲ್‌ಎಸ್ ಜಿಐಟಿಯಲ್ಲಿ ಉತ್ಕೃಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ