ಪ್ರಗತಿವಾಹಿನಿ ಸುದ್ದಿ; ಲಂಡನ್: ಹಸುಗಳ ತೇಗಿನಿಂದ ಉತ್ಪತ್ತಿಯಾಗುವ ಮಿಥೇನ್ ಅನಿಲ ನಿಯಂತ್ರಣದ ಸಲುವಾಗಿ ಮಾಸ್ಕ್ ಕಂಡು ಹಿಡಿಯಲಾಗಿದ್ದು ಮಾಸ್ಕ್ ಸಿದ್ಧಪಡಿಸಿದ ಇಂಗ್ಲೆಂಡ್ ನ ಝೆಲ್ಪ್ ಕಂಪನಿಗೆ ಪ್ರತಿಷ್ಠಿತ ಪ್ರಿನ್ಸ್ ಚಾರ್ಲ್ಸ್ ಪ್ರಶಸ್ತಿ ಲಭಿಸಿದೆ.
ಹಸುಗಳು ತಿನ್ನುವ ಹುಲ್ಲು, ಹಿಂಡಿ ಮತ್ತಿತರ ಆಹಾರ ಪದಾರ್ಥಗಳು ಜೀರ್ಣವಾದ ಬಳಿಕ ಅದರಿಂದ ಮಿಥೇನ್ ಅನಿಲ ಉತ್ಪತ್ತಿಯಾಗುತ್ತದೆ. ಹಸುಗಳ ಉಸಿರು ಮತ್ತು ತೇಗಿನ ಮೂಲಕ ಅವು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ.
ಒಂದು ಹಸು ದಿನಕ್ಕೆ ಸರಾಸರಿ 130 ಗ್ಯಾಲನ್ ಮಿಥೇನ್ ಅನಿಲ ಉತ್ಪತ್ತಿ ಮಾಡಿ ಬಿಡುಗಡೆ ಮಾಡುತ್ತದೆ. ಇದು ಕಾರ್ಬನ್ ಡಯಾಕ್ಸೈಡ್‌ನಿಂದ ತಾಪಮಾನ ಹೆಚ್ಚಳಕ್ಕಿಂತ 28 ಪ್ರತಿಶತ ಹೆಚ್ಚಾಗಿದೆ. ಜಗತ್ತಿನಲ್ಲಿ ಒಟ್ಟಿ 10 ಬಿಲಿಯನ್ ಹಸುಗಳಿದ್ದು ಜಾಗತಿಕ ತಾಪಮಾನ ಏರಿಕೆಯಲ್ಲಿ ಹಸುಗಳು ಹೊರಸೂಸುವ ಮಿಥೇನ್ ಅನಿಲದ ಪ್ರಬಾವ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಹಸುಗಳ ಮುಖದ ಭಾಗದಲ್ಲಿ ಅಳವಡಿಸಬಲ್ಲ ವಿಶಿಷ್ಟ ಬಗೆಯ ಮಾಸ್ಕ್ಅನ್ನು ಝೆಲ್ಪ್ ಕಂಪನಿ ಸಂಶೋಧಿಸಿದೆ. ಈ ಮಾಸ್ಕ್ ಹಸುಗಳು ಹೊರಸೂಸುವ ಮಿಥೇನ್ ಅನಿಲವನ್ನು ಕಾರ್ಬನ್ ಡೈ ಆಕ್ಸೈಡ್ ಮತ್ತು ಕೆಲವು ಭಾಗವನ್ನು ನೀರಾಗಿ ಪರಿವರ್ತಿಸಿ ವಾತಾವರಣಕ್ಕೆ ಬಿಡುತ್ತವೆ. ಮುಂದಿನದಿನಗಳಲ್ಲಿ ಹಸುಗಳ ಮಾಸ್ಕ್ ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಸಂಶೋಧನಾ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಮಾಸ್ಕ್ ಕಂಡು ಹಿಡಿದಿರುವ ಝೆಲ್ಪ್ ಕಂಪನಿಗೆ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಿನ್ಸ್ ಚಾರ್ಲ್ಸ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಜನಾರ್ಧನ ರೆಡ್ಡಿ ಪತ್ನಿಯ ಫೋಟೋ ಶೂಟ್; ರವಿವರ್ಮನ ಕುಂಚದ ಕಲೆಯ ಸುಂದರಿಯಂತೆ ಫೋಸ್ ನೀಡಿದ ಲಕ್ಷ್ಮಿ ಅರುಣಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ