Belagavi NewsBelgaum NewsKannada NewsKarnataka NewsNationalPolitics

*ಹೆದ್ದಾರಿಯಲ್ಲಿ ಕಾರು ಅಪಘಾತ: ಸರ್ಕಾರಿ ನೌಕರ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತ ಪಟ್ಟಿರುವ ಘಟನೆ ಕಿತ್ತೂರ ಸಮಿಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಚಿಕ್ಕೋಡಿ ತಹಶೀಲ್ದಾ‌ರ್ ಕಚೇರಿ ನೌಕರ ಅಮಿತ್ ರಾವ್ ಶಿಂದೆ (35) ಮೃತ ದುರ್ದೈವಿ. ಬೆಂಗಳೂರಿನಿಂದ ಸ್ವಗ್ರಾಮ ಅಕ್ಕೊಳಗೆ ಹೊರಟಿದ್ದ ವೇಳೆ ಮುಂಜಾನೆ 6 ಗಂಟೆಗೆ ಈ ಅಪಘಾತ ಸಂಭವಿಸಿದೆ. ತಕ್ಷಣ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಕೊನೆ ಉಸಿರು ಎಳೆದಿದ್ದಾರೆ.

Home add -Advt

ಕಾರಿನಲ್ಲಿ 4 ಜನರು ಸಂಚರಿಸುತ್ತಿದ್ದರು. ಅದರಲ್ಲಿ ಓರ್ವ ಮೃತ ಪಟ್ಟಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೋಲಿಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಪ್ರವೀಣ ಗಂಗೋಳ ಭೆಟ್ಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button