Latest

ನಾಳೆ ನವದೆಹಲಿಯಲ್ಲಿ ಮಾತಂಗಿ ದೀವಟಿಗೆ ಚಿತ್ರಪ್ರದರ್ಶನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಲ್ಲಿಯ ನಾಟಕಕಾರ ಡಾ.ಡಿ.ಎಸ್. ಚೌಗಲೆ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಪ್ರೊ.ಸಮತಾ ದೇಶಮಾನೆ ಅವರ ದಲಿತ ಆತ್ಮಕತೆ ಆಧರಿಸಿದ, ಮಂಜು ಪಾಂಡವಪುರ ನಿರ್ದೇಶಿಸಿದ ಮಾತಂಗಿ ದೀವಟಿಗೆ ಚಲನಚಿತ್ರದ ಪ್ರದರ್ಶನವು ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣ, ರಾವ್ ತುಲಾರಾಂ ಮಾರ್ಗ, ಸೆಕ್ಟರ್ ನಂ-11, ಆರ್ಲ್ಲಿ ಕೆ ಪುರಂ ನವದೆಹಲಿ ಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ದೆಹಲಿ ಕರ್ನಾಟಕ ಸಂಘ(ರಿ) ಆಯೋಜಿಸಿದ “ಅಮೃತ ಮಹೋತ್ಸವ ಸಂಭ್ರಮಾಚರಣೆ”ಯ ಕಲ್ಯಾಣ ಕರ್ನಾಟಕ ಜಿಲ್ಲಾ ಸಾಂಸ್ಕೃತಿಕ ಉತ್ಸವದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಮಧ್ಯ ಮಾತಂಗಿ ದೀವಟಿಗೆ ಪ್ರದರ್ಶನ ಕಾಣುತ್ತಿದೆ.

Home add -Advt

ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಕಲ್ಯಾಣ ಕರ್ನಾಟಕದ ಸಂಸದರು ಮತ್ತು ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಾಲ್ಕು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ

Related Articles

Back to top button