Latest

ಕೋವಿಡ್ ಟೆಸ್ಟ್ ಅಗತ್ಯ ನನಗಿಲ್ಲ, ಆರೋಗ್ಯ ಸಚಿವರಿಗೆ ಟೆಸ್ಟ್ ಮಾಡಿ; ಅಧಿಕಾರಿಗಳ ವಿರುದ್ಧ ಹರಿಹಾಯ್ದ ಡಿಕೆಶಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ನ ಎರಡನೇ ದಿನದ ಪಾದಯಾತ್ರೆ ಮುಂದುವರೆದಿದ್ದು, ಈ ವೇಳೆ ಕೋವಿಡ್ ಟೆಸ್ಟ್ ಗೆ ಆರೋಗ್ಯ ಇಲಾಖೆ ಕಳುಹಿಸಿದ್ದ ಅಧಿಕಾರಿಗಳ ವಿರುದ್ಧವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದ ಘಟನೆ ನಡೆದಿದೆ.

ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ, ಕೋವಿಡ್ ಟೆಸ್ಟ್ ಮಾಡಿಸಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹಾಗೂ ಜಿಲ್ಲಾ ವೈದ್ಯಾಧಿಕಾರಿ ನಿರಂಜನ್ ನೀಡಿದ ಸಲಹೆಗೆ ಗರಂ ಆದ ಡಿ.ಕೆ.ಶಿವಕುಮಾರ್, ನಾನೊಬ್ಬ ಜನಪ್ರತಿನಿಧಿ, ನನಗೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಾ? ನೀವಿ ನಿಮ್ಮ ಆರೋಗ್ಯ ಸಚಿವರಿಗೆ ಹೋಗಿ ಟೆಸ್ಟ್ ಮಾಡಿ. ಬಚ್ಚಾಗಳ ಹತ್ತಿರ ಆಟ ಆಡಲು ಹೋಗಿ ನನ್ನ ಬಳಿಯಲ್ಲ. ನನ್ನ ನೋಡಿದರೆ ಕೋವಿಡ್ ಲಕ್ಷಣವಿದ್ದಂತೆ ಅನಿಸುತ್ತಿದೆಯಾ? ನನಗೆ ಯಾವ ಟೆಸ್ಟ್ ಅಗತ್ಯವೂ ಇಲ್ಲ. ನಾನು ಫಿಟ್ ಆಂಡ್ ಫೈನ್ ಆಗಿದ್ದೇನೆ ಎಂದು ಗುಡುಗಿದ್ದಾರೆ.

ಅಲ್ಲದೇ ನನಗೆ ಕೋವಿಡ್ ಟೆಸ್ಟ್ ಮಾಡಿಸಿ ಬಳಿಕ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅವರದಿ ಕೊಟ್ಟು ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಇಂತಹ ಯಾವ ಷಡ್ಯಂತ್ರ ನಡೆಯಲ್ಲ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ. ಯಾವ ಕೋವಿಡ್ ಟೆಸ್ಟ್ ಗೂ ನಾನು ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ.ಶಿವಕುಮಾರ್ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯದ ದೃಷ್ಟಿಯಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚಿಸಿದರೆ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದು ಅವರ ಕಲ್ಚರ್ ತೋರುತ್ತೆ. ಡಿ.ಕೆ.ಶಿವಕುಮಾರ್ ಮಾತ್ರವಲ್ಲ, ಪಾದಯಾತ್ರೆಯಲ್ಲಿ ಭಾಗಿಯಾದ ಎಲ್ಲರಿಗೂ ತಪಾಸಣೆ ನಡೆಸಲಾಗುವುದು ಎಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ 30 ‘ಕೈ’ ನಾಯಕರ ವಿರುದ್ಧ FIR ದಾಖಲು

Home add -Advt

Related Articles

Back to top button