Kannada NewsKarnataka News

ಬೀಗರ ಊಟ ಮಾಡಿದ 96 ಜನರಿಗೆ ವಾಂತಿಭೇದಿ

ಪ್ರಗತಿವಾಹಿನಿ ಸುದ್ದಿ: ಮದುವೆ ಊಟ ಮಾಡಿದ 96 ಜನರಿಗೆ ವಾಂತಿ ಭೇದಿ ಆಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿಯಲ್ಲಿ ನಡೆದಿದೆ.‌

ಮದುವೆ ಮುಗಿಸಿಕೊಂಡು ಬೀಗರ ಊಟ ಮಾಡಿದ 96 ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ.‌ ಮದುವೆ ಸಮಾರಂಭದ ಬಳಿಕ‌ ನಿನ್ನೆ  ಬೀಗರ ಊಟ ಮಾಡಿ ಮಲಗಿದ್ದವರಲ್ಲಿ ತಡರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿಬೇಧಿಯಿಂದ ಬಳಲುತ್ತಿರುವ 96 ಜನರು  ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Home add -Advt

96 ಜನರಲ್ಲಿ 22 ಮಕ್ಕಳಿದ್ದಾರೆ. ಆಸ್ಪತ್ರೆಗೆ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಡಿಎಚ್ಒ ಡಾ.ಶಂಕರನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವಿಜಯ ನಗರ ಜಿಲ್ಲೆಯ DHO ತಿಳಿಸಿದ್ದಾರೆ.

Related Articles

Back to top button