Latest

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗೋಲ್ ಮಾಲ್; ಎಂ.ಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಮಹಾತ್ಮಾಗಾಂಧಿ ಉದ್ಯಾನವನ ವೇದಿಕೆ ವತಿಯಿಂದ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಎಂಡಿ ಶಕೀಲ್ ಅಹ್ಮದ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ಅಭಿವೃದ್ಧಿಯಲ್ಲಿ ಭಾರಿ ಗೋಲ್ ಮಾಲ್ ಮಾಡಿದ್ದಾರೆ. ಹಳೆ ಕಮಗಾರಿಗೆ ಹೊಸ ಬಿಲ್ ಸೃಷ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಮಹಾತ್ಮಾ ಗಾಂಧಿ ಉದ್ಯಾನವನ ವೇದಿಕೆ ಆರೋಪಿಸಿದೆ.

Home add -Advt

26 ಕೋಟಿ ರೂ ವೆಚ್ಚದ ಕಾಮಗಾರಿಯಲ್ಲಿ 16 ಕೋಟಿ ರೂ. ಗೂ ಹೆಚ್ಚು ಅವ್ಯವಹಾರ ನಡೆದಿದೆ. ಇದೇ ರೀತಿ ಹಲವು ಕಾಮಗಾರಿಗಳಲ್ಲೂ ಗೋಲ್ ಮಾಲ್ ನಡೆಸಿದ್ದಾರೆ ಎಂದು ಆರೋಪಿಸಿ ವೇದಿಕೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿದೆ.
ಮಾಲ್ ನಲ್ಲಿ ಗುಂಡಿನ ದಾಳಿ; ಮೂವರ ಬರ್ಬರ ಹತ್ಯೆ

Related Articles

Back to top button