Kannada NewsLatest

2,500 ಕೋಟಿ ರೆಡಿ ಮಾಡಿ, ಸಿಎಂ ಮಾಡ್ತೀವಿ ಎಂದು ಕರೆದಿದ್ರು; ಶಾಸಕ ಯತ್ನಾಳ್ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡ್ತೀವಿ, ದೆಹಲಿಗೆ ಕರೆದುಕೊಂಡು ಹೋಗ್ತೀವಿ. ಸೋನಿಯಾ ಗಾಂಧಿ , ಜೆ.ಪಿ.ನಡ್ಡಾ ಭೇಟಿ ಮಾಡಿಸ್ತೀವಿ ಅಂತಾರೆ ಅವರ ಮಾತು ಕೇಳಿ ಹೋಗಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಯತ್ನಾಳ್, ದೆಹಲಿಯಿಂದ ಬಂದ ಕೆಲವರು ನನಗೂ ಸಿಎಂ ಮಾಡ್ತೀನಿ 2,500 ಕೋಟಿ ರೂಪಾಯಿ ನೀಡಿ ಎಂದಿದ್ದರು. ನಾನು ಹೇಳಿದೆ 2500 ಕೋಟಿ ಅಂದ್ರೆ ಏನ್ ಅಂತಾ ತಿಳ್ಕೊಂಡಿದ್ದೀರಿ? ಅಷ್ಟು ಅಹಣವನ್ನು ಎಲ್ಲಿ ಕೋಣೆಯಲ್ಲಿ ಇಡೋದಾ? ಗೋದಾಮಿನಲ್ಲಿಡೋದಾ? ರಾಜಕಾರಣದಲ್ಲಿ ಎಲ್ಲಾ ಕದೆ ಮೋಸ ಮಾಡ್ತಾರೆ. ನಾನು ವಾಜಪೇಯಿ ಕೈಲಿ ಕೆಲಸ ಮಾಡಿದವ. ಅಡ್ವಾಣಿ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತ ಕರಿತೀದ್ರು ಅಂತಾ ವ್ಯಕ್ತಿಗೆ ಹೇಳ್ತಾರೆ 2,500 ಕೋಟಿ ಸಜ್ಜು ಮಾಡಿ ಎಂದು ಹೀಗೆಲ್ಲ ಮೋಸಗಳು ನಡೆಯುತ್ತೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಸಿಎಂ ಆಗೋವರೆಗೂ ನಿಮ್ಮ ಚೇಂಬರ್ ಗೆ ಬರಲ್ಲ ಎಂದಿದ್ದೆ. ಲಿಂಗಾಯತದಲ್ಲಿ 72% ಪಂಚಮಸಾಲಿ ಸಮುದಾಯದವರಿದ್ದಾರೆ. ಇಲ್ಲಿಯವರೆಗೂ ರಾಜ್ಯದ ಸಿಎಂ ಆದವರು ಎರಡು ಪರ್ಸೆಂಟ್. ನಾನು ನಾಟಕವಾಡಿದ್ರೆ ಈ ಹಿಂದೆನೇ ಸಿಎಂ ಆಗ್ತಿದ್ದೆ. ಪಾಪ ಯಡಿಯೂರಪ್ಪಗೆ ಪುತ್ರ ವ್ಯಾಮೋಹ ಬಂದು ಯತ್ನಾಳ್ ನನ್ನು ಮಂತ್ರಿ ಮಾಡಿದ್ರೆ ನನ್ನ ಧೀಮಂತ ಮಗ ವಿಜಯೇಂದ್ರ ಗತಿಯೇನು? ಎಂದು ಅದಕ್ಕೆ ಮಂತ್ರಿ ಮಾಡದೇ ತುಳಿಯೋದು. ನಾನೇ ಲೆಟರ್ ಕೊಟ್ರು ಸೈಡ್ ಗೆ ಹಾಕಿದರು. ಅದಕ್ಕೆ ನೀವು ಸಿಎಂ ಆಗಿರುವವರೆಘೂ ನಿಮ್ಮ ಛೇಂಬರ್ ಗೆ ಬರಲ್ಲ, ಕಾವೇರಿಗ್ ಬರಲ್ಲ, ಕೃಷ್ಣಾಗೂ ಬರಲ್ಲ ಎಂದಿದ್ದೆ. ಮುಂದೆ ಬೊಮ್ಮಾಯಿ ಸಿಎಂ ಆಗಿ ಕರೆದಾಗ ಹೋಗಿದ್ದೆ ಎಂದು ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕ ತಜಿಂದರ್ ಅರೆಸ್ಟ್

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button