Latest

Humanity story – ಅಂಧರ ಬಾಳಿಗೆ ಬೆಳಕಾಗಿ; ನಿಮ್ಮ ಕೈಲಾದಷ್ಟು ಸಹಾಯ ಮಾಡಿ

ಪ್ರಗತಿವಾಹಿನಿ ಸುದ್ದಿ, ರಾಣೆಬೆನ್ನೂರು – ರಾಣೇಬೆನ್ನೂರಿನಲ್ಲಿರುವ ಅಂಧರ ಜೀವ ಬೆಳಕು ಸಂಸ್ಥೆಯು ಅಂಧ ಮಕ್ಕಳ ಬಾಳಿನಲ್ಲಿ ನೆರವಾಗುವ ಕೆಲಸ ಮಾಡುತ್ತಿದೆ. ಈ ಸಂಸ್ಥೆಯ ಸಂಸ್ಥಾಪಕರಾದ ನಾಗನಗೌಡ ಡಿ. ಬೆಳೊಳ್ಳಿ ಇವರು ಸಹ ಸಂಪೂರ್ಣ ಅಂಧರಾಗಿದ್ದು ಈ ಸಂಸ್ಥೆಯನ್ನು ಜುಲೈ 1, 2018 ರಲ್ಲಿ ಪ್ರಾರಂಭಿಸುವುದರ ಮುಖಾಂತರ ಆನೇಕ ದೃಷ್ಟಿ ವಿಕಲಚೇತನರಿಗೆ ಬೆಳಕನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಸಾಕಷ್ಟು ಕಷ್ಟಗಳಿದ್ದರೂ ಸ್ವಯಂ ಅಂಧರಾಗಿರುವ ಇವರು ಅಂಧ ಮಕ್ಕಳ ನೋವುಗಳನ್ನು ಅರಿತು ಅಂಧ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ.
ಈ ಸಂಸ್ಥೆಯು ಸರಕಾರದಿಂದ ಯಾವುದೇ ಅನುದಾನವನ್ನು ಪಡೆದುಕೊಂಡಿಲ್ಲ ಸಾರ್ವಜನಿಕರ ಸಹಾಯ ಸಹಕಾರದಿಂದ ನಡೆದುಕೊಂಡು ಬರುತ್ತಿದೆ.
ಲಾಭರಹಿತ ಸಂಸ್ಥೆಯಾಗಿರುವ ಜೀವ ಬೆಳಕು ಸಂಸ್ಥೆ ಅಂಧ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸಾರಿಗೆ, ಕಂಪ್ಯೂಟರ್ ಶಿಕ್ಷಣ, ಆಂಗ್ಲ ಭಾಷೆ ಕಲಿಕೆ, ಕ್ರೀಡೆ, ಸಂಗೀತ, ನಾಟಕ ಮತ್ತು ಜೀವನ ಕೌಶಲಗಳನ್ನು ಕಲಿಸಿ ಕೊಡುತ್ತಿದೆ.
ತರಬೇತಿ ಪೂರ್ಣಗೊಂಡ ನಂತರ ಸರ್ಕಾರ ಮತ್ತು ಸರ್ಕಾರೇತರ ಉದ್ಯೋಗಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಈ ತರಬೇತಿಗಳಿಂದ ಅಂಧರು ಆರ್ಥಿಕವಾಗಿ ಸದೃಢರಾಗಿ ಸಮಾಜದಲ್ಲಿ ಗೌರವದಿಂದ ಬದುಕುತ್ತಾರೆ.
2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ
ಪ್ರವೇಶಾತಿಯನ್ನು ಪಡೆಯಲು ಆಂಧ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಕಾಲೇಜು ಶುಲ್ಕವನ್ನು ಭರಿಸಲು ಮಹಾಮಾರಿ ಕೊರೋನಾದಿಂದಾಗಿ ಸಮಸ್ಯೆಯುಂಟಾಗಿದೆ.
ಜೀವ ಬೆಳಕು ಸಂಸ್ಥೆಯ ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಅವರ ಬಾಳಿಗೆ ಬೆಳಕನ್ನು ಮೂಡಿಸಿ ಎಂದು ಅಧ್ಯಕ್ಷ ನಾಗನಗೌಡ ಬೆಳೊಳ್ಳಿ ಮನವಿ ಮಾಡಿದ್ದಾರೆ.

 1. One day meal for 18 Blind Students – Breakfast – Rs.500, Lunch – Rs.700, Dinner Rs.800

2. One blind student College and examination fees – Rs. 8000/year

3. Electric bill Rs 400 to 600
4. White Cane – Rs.250 each
5. Braille Sheets – Rs.3 each paper
6. Rent Rs. 5500
7. Cook salary: Rs. 4000
The Donations made to Andhara Jeeva belaku  is exempted from Income tax Under 80G
Andhara Jeeva Belaku trust Ranebennur  , Haveri – 581115
  *For more details contact –  9535951112
  ಅಕೌಂಟ್ ನಂ: 0508101043349, IFSC :CNRB0000569
Canara Bank, Ranebennur,

Home add -Advt

Related Articles

Back to top button