Latest

ಕಂಗ್ರಾಳಿ ಖುರ್ದ, ಕುದ್ರೆಮನಿಯಲ್ಲಿ ಪ್ರಭಾಕರ ಕೋರೆ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಆದರ್ಶ ನಾಯಕನಿದ್ದರೆ ಆದರ್ಶ ರಾಷ್ಟ್ರ ನಿರ್ಮಾಣಗೊಳ್ಳುತ್ತದೆ ಎನ್ನುವುದಕ್ಕೆ ನರೇಂದ್ರ ಮೋದಿಯವರು ಒಂದು ಜ್ವಲಂತ ನಿದರ್ಶನವೆನಿಸಿದ್ದಾರೆ. ಅವರಿಂದ ಭಾರತ ಪ್ರಕಾಶಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

Home add -Advt


ಅವರು ಬೆಳಗಾವಿಯ ಕಂಗ್ರಾಳಿ ಖುರ್ದ ಹಾಗೂ ಕುದ್ರೆಮನಿಯಲ್ಲಿ ಬಿಜೆಪಿಯ ಸುರೇಶ ಅಂಗಡಿ ಪರ ಮತಯಾಚನೆ ಮಾಡುತ್ತ ಮಾತನಾಡಿದರು. ಭಾರತೀಯ ಜನತಾ ಪಾರ್ಟಿ ಕಳೆದ ಐದು ವರ್ಷಗಳಲ್ಲಿ ಬಹುಮೌಲಿಕ ಕೊಡುಗೆಯನ್ನು ನೀಡಿದೆ. ದೇಶದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಮೋದಿಯವರ ಸಮರ್ಥ ನೇತೃತ್ವದಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡಲಾಗಿದೆ. ಫಸಲ್ ಭೀಮಾಯೋಜನೆ, ಸ್ವಚ್ಚ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾದಂತಹ ಹಲವಾರು ಯೋಜನೆಗಳು ದೇಶದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಕಾಂಗ್ರೆಸ್ ಆರು ದಶಕಗಳಲ್ಲಿ ಸಾಧಿಸದ್ದನ್ನು ಮೋದಿ ಸರ್ಕಾರ ಸಾಧಿಸಿ ತೋರಿಸಿದೆ ಎಂದರು.

ಈ ಸಂದರ್ಭದಲ್ಲಿ ಶಿವಾಜಿ ಸುಂಟ್ಕರ್, ಘೋರ್ಪಡೆ, ತಾಲೂಕಾ ಪಂಚಾಯತ್ ಸದಸ್ಯರಾದ ಸಾಗರ ಪಾಟೀಲ, ಸಚಿನ ಪಾಟೀಲ, ಕುದ್ರಿಮನಿಯ ಈಶ್ವರ ಗುರವ, ಮಲ್ಲು ಗುರವ ಬಂಧುಗಳು, ಮಾಣಿಕ ಗೋಬೆಕರ್, ಸಂಜಯ ಪಾಟೀಲ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Back to top button