Kannada NewsKarnataka NewsPolitics

*ಅಕ್ರಮವಾಗಿ ಸಾಗಿಸುತ್ತಿದ್ದ 23 ಗೋವುಗಳನ್ನು ರಕ್ಷಿಸಿದ ಶಾಸಕ ಶರಣು ಸಲಗರ*

ಪ್ರಗತಿವಾಹಿನಿ ಸುದ್ದಿ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಅವುಗಳನ್ನು ಸ್ವತಃ ಶಾಸಕರೇ ರಕ್ಷಣೆ ಮಾಡಿರುವ ಘಟನೆ ಬೀದರನ ಬಸವಕಲ್ಯಾಣ ತಾಲೂಕಿನ ಅಲಗೂಡ ಗ್ರಾಮದ ಸಮೀಪ ನಡೆದಿದೆ.

ಬಸವಕಲ್ಯಾಣದಿಂದ ಅಲಗೂಡ ಚಿಟ್ಟಾ ಗ್ರಾಮದ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 23 ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ ತಮ್ಮ ಬೆಂಬಲಿಗರ ಜತೆಗೂಡಿ ಸಹ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರಕ್ಷಿಸಿದ ಗೋವುಗಳನ್ನು ಗೋಶಾಲೆಗೆ ರವಾನೆ ಮಾಡಲಾಗಿದೆ. 

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ವಾಹನ ಸೀಜ್ ಮಾಡಿ ಡ್ರೈವರ್ ನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Home add -Advt

Related Articles

Back to top button