Kannada NewsKarnataka NewsLatest

*ಚಾರ್ಜರ್ ಗೆ ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವು*

ಪ್ರಗತಿವಾಹಿನಿ ಸುದ್ದಿ; ಕಾರವಾರ: ಪೋಷಕರು ಮಕ್ಕಳ ಬಗ್ಗೆ ಎಷ್ಟೇ ಜಾಗೃತರಾಗಿದ್ದರೂ ಕಡಿಮೆಯೇ. ಇಲ್ಲೊಂದು ಪುಟಾಣಿ ಮಗು ಮೊಬೈಲ್ ಚಾರ್ಜರ್ ವೈಯರ್ ನಿಂದ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಉತ್ತರ ಕನ್ನದ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸಂಜನಾ ದಂಪತಿಯ 8 ತಿಂಗಳ ಮಗು ಮೃತ ಕಂದಮ್ಮ.

ಪೋಷಕರು ಮೊಬೈಲ್ ಚಾರ್ಜರ್ ಹಾಕಿ ಆಫ್ ಮಾಡದೇ ಹಾಗೇ ಬಿಟ್ಟಿದ್ದರು. ಆನ್ ಇದ್ದ ಮೊಬೈಲ್ ಚಾರ್ಜರ್ ವೈಯರ್ ನ್ನು ಮಗು ಬಾಯಿಯಲ್ಲಿ ಇಟ್ಟುಕೊಂಡಿದೆ. ತಕ್ಷಣ ವಿದ್ಯುತ್ ಪ್ರವಹಿಸಿ ಮಗು ಮೃತಪಟ್ಟಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button