Latest

ಮಂಗಗಳ ಮಾರಣ ಹೋಮ; ಗುತ್ತಿಗೆ ಪಡೆದು ಕೃತ್ಯವೆಸಗಿದ್ದ ದಂಪತಿ

ಪ್ರಗತಿವಾಹಿನಿ ಸುದ್ದಿ; ಹಾಸನ: ಮೂರುದಿನಗಳ ಹಿಂದೆ ನಡೆದಿದ ಮಂಗಗಳ ಮಾರಣ ಹೋಮ ಪ್ರಕರಣ ಭೇದಿಸಿರುವ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಮೀನು ಮಾಲೀಕರಾದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು ಹಾಗೂ ಕೋತಿಗಳನ್ನು ಸೆರೆಹಿಡುಇದಿದ್ದ ರಾಮು, ಯಶೋಧ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಗಳು ಬೆಳೆ ನಾಶ ಮಾಡುತ್ತವೆ ಎಂದು ಪ್ರಸನ್ನ ಹಾಗೂ ರುದ್ರೇಗೌಡ ಮಂಗಗಳನ್ನು ಹಿಡಿದು ಸಾಲಿಸಲು 40 ಸಾವಿರರೂಪಾಯಿಗೆ ಯಶೋಧ ಹಾಗೂ ರಾಮು ದಂಪತಿಗೆ ಗುತ್ತಿಗೆ ನೀಡಿದ್ದರು. ಆಹಾರ ಆಸೆ ತೀರಿಸಿ 50 ಕೋತಿಗಳನ್ನು ಸೆರೆ ಹಿಡಿದಿದ್ದ ದಂಪತಿ ಬಳಿಕ ಅವುಗಳನ್ನು ಸಾಯಿಸಿ ಚೀಲದಲ್ಲಿ ತುಂಬಿ ಬೇಲೂರು ಬಳಿಯ ಚೌಡನಹಳ್ಳಿ ಬಳಿ ರಸ್ತೆ ಬದಿ ಬಿಸಾಗಿದ್ದರು. ಮಂಗಗಳನ್ನು ಕೊಂದಿದ್ದಕ್ಕೆ ಮರುದಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದ್ದರು. ಒಟ್ಟಾರೆ ಮೂರೇ ದಿನದಲ್ಲಿ ಪ್ರಕರಣ ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಎಂ ಬೊಮ್ಮಾಯಿ ಜೆ.ಪಿ.ನಡ್ಡಾ ಭೇಟಿ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button