ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಬೆಂಬಲ: ಅಮಲಝರಿ ಗ್ರಾಮದ ಕುರುಬ ಸಮಾಜದ ನಿರ್ಧಾರ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: : ’ನಮ್ಮ ಸಮಾಜದ ಕೆಲ ಬಾಂಧವರು ನಮ್ಮನ್ನು ತಪ್ಪು ದಾರಿಗೆ ಎಳೆದು ಇತರ ಪಕ್ಷಗಳಿಗೆ ಬೆಂಬಲಿಸಲು ಒತ್ತಾಯಿಸಿದ್ದರು. ಆದರೆ ಸಚಿವೆ ಶಶಿಕಲಾ ಜೊಲ್ಲೆಯವರು ನಮ್ಮ ಸಮಾಜದ ಹಾಗೂ ನಮ್ಮ ಗ್ರಾಮದ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳಿಗಾಗಿ ಅವರನ್ನೆ ಬೆಂಬಲಿಸಲು ನಿರ್ಣಯಿಸಲಾಗಿದೆ’ ಎಂದು ತಾಲೂಕಿನ ಅಮಲಝರಿ ಗ್ರಾಮದ ಕುರುಬ ಸಮಾಜದ ಅಧ್ಯಕ್ಷ ಸೋಮರಾಯ ಯಮಗರ ಹೇಳಿದರು.
ಗ್ರಾಮದಲ್ಲಿ ಭಾನುವಾರ ಸಚಿವೆ ಶಶಿಕಲಾ ಜೊಲ್ಲೆಯವರ ಸಮ್ಮುಖದಲ್ಲಿ ಅವರಿಗೆ ಬೆಂಬಲಿಸಲು ನಿರ್ಧಾರಕ್ಕೆ ಬಂದು ಅವರು ಮಾತನಾಡಿದರು. ’ಸಚಿವೆ ಜೊಲ್ಲೆಯವರು ನಮ್ಮ ಸಮಾಜಕ್ಕಾಗಿ ಭವ್ಯ ಕನಕ ಭವನ ನಿರ್ಮಿಸಿದ್ದಾರೆ. ಅಲ್ಲದೆ ೬ ಗುಂಟೆ ಜಾಗ ಕಲ್ಪಿಸಿದ್ದಾರೆ’ ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಕ್ಷೇತ್ರದಲ್ಲಿ ಕುರುಬ ಸಮಾಜದೊಂದಿಗೆ ಎಲ್ಲ ಸಮಾಜದ ಅಭಿವೃದ್ಧಿಗೆ ನಾನು ಕಟಿಬದ್ಧನಾಗಿದ್ದೇನೆಂದರು.
ದರಿಯಪ್ಪ ಗಾವಡೆ, ಸಿದ್ದಪ್ಪಾ ಬನ್ನೆ, ಮಹಾದಪ್ಪಾ ಗಾವಡೆ, ರಾಮಾ ಬನ್ನೆ, ಅಜಿತ ಪೂಜಾರಿ, ಯಲ್ಲಪ್ಪಾ ಪೂಜಾರಿ, ನೇಮಣ್ಣಾ ಪೂಜಾರಿ, ಮೊದಲಾದವರು ಸೇರಿದಂತೆ ನೂರಕ್ಕೂ ಅಧಿಕ ಇತರ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಸಿದ್ದು ನರಾಟೆ, ಪ್ರಕಾಶ ಶಿಂಧೆ, ಸಿದ್ರಾಮ ಪೂಜಾರಿ, ಸಂತು ಗಾವಡೆ, ಮಂಜುನಾಥ ಪೂಜಾರಿ, ಶಿವಾಜಿ ಖೋತ, ಬಳಿರಾಮ ಖೋತ, ಮೊದಲಾದವರು ಉಪಸ್ಥಿತರಿದ್ದರು.
ಪಾಂಗೀರೆ(ಬಿ): ತಾಲೂಕಿನ ಪಾಂಗಿರೆ(ಬಿ) ಗ್ರಾಮದ ಸಿದ್ರಾಮ ದುದಾಡೆ, ದತ್ತಾತ್ರೇಯ ಪಾಲಕರ, ಕಿರಣ ಕಾಂಬಳೆ, ವಿಜಯ ದುದಾಡೆ, ವಿಜಯ ಕೆಂಗಾರೆ, ಮೊದಲಾದವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರನ್ನು ಸಚಿವೆ ಶಶಿಕಲಾ ಜೊಲ್ಲೆ ಪಕ್ಷದ ಶಾಲು ತೊಡಿಸಿ ಸ್ವಾಗತಿಸಿದರು.
ಭೋಜನ ನೂರಾರು ಕೈ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ನಿಪ್ಪಾಣಿ: ತಾಲೂಕಿನ ಭೋಜ ಗ್ರಾಮದ ಪರಿಟ ಸಮಾಜದ ನೂರಾರು ಬಾಂಧವರು ಭಾನುವಾರ ಕಾಂಗ್ರೆಸ್ ಪಕ್ಷ ತೊರೆದು ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಭಾವುಸಾಹೇಬ ಪರಿಟ, ಶ್ರೀಕಾಂತ ಪರಿಟ, ಭರಮಾ ಪರಿಟ, ಸುಭಾಷ ಪರಿಟ, ಪ್ರಕಾಶ ಪರಿಟ, ರಾವಸಾಬ ಪರಿಟ, ಕೃಷ್ಣಾ ಪರಿಟ, ರಾಮು ಪರಿಟ, ಅಣ್ಣಪ್ಪ ಪರಿಟ, ಭೂಪಾಲ ಪರಿಟ, ಜಯಪಾಲ ಪರಿಟ, ಕಲ್ಲಪ್ಪ ಮುರಾಬಟ್ಟೆ, ಶಾಲಾಬಾಯಿ ಪರಿಟ, ಕಮಲಾ ಪರಿಟ, ಮಂಗಲ ಪರಿಟ, ಪಾರ್ವತಿ ಪರಿಟ, ಸುಶೀಲಾ ಪರಿಟ, ಅರುಣಾ ಪರಿಟ, ಮಾಲುತಾಯಿ ಪರಿಟ, ಸುನೀತಾ ಮುರಾಬಟ್ಟೆ, ರಾಜಶ್ರೀ ಮುರಾಬಟ್ಟೆ, ಮೊದಲಾದವರು ಸೇರಿದಂತೆ ನೂರಾರು ಕೈ ಕಾರ್ಯಕರ್ತರನ್ನು ಸಂಸದ ಜೊಲ್ಲೆ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ