Latest

ರಾಜ್ಯಪಾಲರು ಕೊಟ್ಟ ಡೆಡ್ ಲೈನ್ ಮುಕ್ತಾಯ

ರಾಜ್ಯಪಾಲರು ಕೊಟ್ಟ ಡೆಡ್ ಲೈನ್ ಮುಕ್ತಾಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರು ನೀಡಿದ್ದ ಸಮಯ ಮುಕ್ತಾಯವಾಗಿದ್ದು, ಸದನದಲ್ಲಿ ಇನ್ನೂ ಚರ್ಚೆ ಮುಂದುವರಿದಿದೆ.

Home add -Advt

ಆದರೆ, ಚರ್ಚೆ ಮುಗಿಯದೆ ಮತಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದ್ದಾರೆ. ನಿಮಗೆ ಅರ್ಜಂಟ್ ಇದೆ ಎಂದು ನಾನು ನಿಯಮ ಮೀರುವುದಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಮತಕ್ಕೆ ಹಾಕುವಂತೆ ಒತ್ತಾಯಿಸುತ್ತಿದೆ. ಆದರೆ ಆಡಳಿತ ಪಕ್ಷ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಸದನಕ್ಕೆ ಸೂಚನೆ ನೀಡಲು ರಾಜ್ಯಪಾಲರಿಗೆ ಅಧಿಕಾರವಿಲ್ಲ ಎಂದು ವಾದಿಸುತ್ತಿದೆ.

ಸದನದಲ್ಲಿ ಗದ್ದಲ ನಡೆಯುತ್ತಿದ್ದರಿಂದ ಸ್ಪೀಕರ್ ಊಟದ ವಿರಾಮ ಘೋಷಿಸಿದ್ದು, 3 ಗಂಟೆಗೆ ಪುನಃ ಸೇರಲಿದೆ. ಮುಂದೇನಾಗುತ್ತದೆ ಎಂದು ತುದಿಗಾಲಲ್ಲಿ ನಿಂತು ಕಾಯುವಂತಾಗಿದೆ.

Related Articles

Back to top button