Karnataka NewsLatest

*ಹೆತ್ತ ತಾಯಿಯಿಂದಲೇ 6 ವರ್ಷದ ಮಗನ ಕಿಡ್ನ್ಯಾಪ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪೋಷಕರೇ ಮಕ್ಕಳಿಗೆ ಹಿಂಸೆ ನೀಡುತ್ತಿರುವ ಘಟನೆ, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಮಧ್ಯೆ ಹೆತ್ತ ತಾಯಿಯೇ ತನ್ನ ಮಗುವನ್ನು ಕಿಡ್ನ್ಯಾಪ್ ಮಾಡಿ ಹೊತ್ತೊಯ್ದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ಈ ಘಟನೆ ನಡೆದಿದೆ. ಹೆತ್ತ ತಾಯಿ ಅನುಪಮಾ ಎಂಬ ಮಹಿಳೆ ತನ್ನ 6 ವರ್ಷದ ಮಗನನ್ನು ಸಾರ್ವಜನಿಕರ ಮುಂದೆಯೇ ಅಪಹರಿಸಿದ್ದಾಳೆ.

6 ವರ್ಷದ ಬಾಲಕ ಬೆಳಿಗ್ಗೆ ಶಾಲೆಗೆ ಹೋಗಲೆಂದು ಬಸ್ ಗಾಗಿ ಕಾಯುತ್ತ ತನ್ನ ತಾತನ ಜೊತೆ ನಿಂತಿದ್ದ. ಅಕ್ಕಪಕ್ಕದಲ್ಲಿ ಇತರ ಶಾಲೆ ಮಕ್ಕಳು, ಪೋಷಕರು ಕೂಡ ನಿಂತಿದ್ದರು. ಇದೇ ವೇಳೆ ಓರ್ವ ಮಹಿಳೆ ಬಾಲಕನಿದ್ದಲ್ಲಿಗೆ ಬಂದು ತಾತನನ್ನು ತಳ್ಳಿಹಾಕಿ ಬಾಲಕನನ್ನು ಹೊತ್ತೊಯ್ದಿದ್ದಾಳೆ. ಬಾಲಕನ್ನು ಬಿಡಿಸಲು ತಾತ ಯತ್ನಿಸಿದರೂ ಸಾಧ್ಯವಾಗಿಲ್ಲ. ಮಹಿಳೆಯ ಜೊತೆಗಿದ್ದ ವ್ಯಕ್ತಿ ತಳ್ಳಿ ಹಾಕಿದ್ದಾನೆ. ಸ್ಥಳದಲ್ಲಿದ್ದವರೆಲ್ಲರೂ ಗಾಬರಿಯಾಗಿದ್ದಾರೆ. ಮಹಿಳೆ ಮಗನನ್ನು ಅಪಹರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಹಿಳೆ ಅನುಪಮಾ ಹಾಗೂ ಸಿದ್ಧಾರ್ಥ್ 2014ರಲ್ಲಿ ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಮಗನಿದ್ದಾನೆ. ಪತಿ-ಪತ್ನಿ ನಡುವೆ ವೈಮನಸ್ಯವುಂಟಾಗಿ ಇಬ್ಬರೂ ದೂರಾಗಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ಕೋರ್ಟ್ ಮಗು ಪತಿ ಸಿದ್ಧಾರ್ಥ್ ಬಳಿ ಇರಲೆಂದು ಆದೇಶ ನೀಡಿ, ಸಿದ್ಧಾರ್ಥ್ ಬಳಿ ನೀಡಿತ್ತು. ಕೋರ್ಟ್ ಆದೇಶವಿದ್ದರೂ ಪತ್ನಿ ಅನುಪಮಾ ಶಾಲೆಗೆ ಹೋಗುತ್ತಿದ್ದ ಮಗನನ್ನು ಹಾಡಹಗಲೇ ಅಪಹರಿಸಿದ್ದಾಳೆ.

Home add -Advt


Related Articles

Back to top button