Kannada NewsKarnataka News

ಯಮಕನಮರಡಿಯಲ್ಲಿ ಕಿರಾಣಿ ಅಂಗಡಿ ಮಾಲೀಕನ ಕೊಲೆ

ಪ್ರಗತಿವಾಹಿನಿ ಸುದ್ದಿ,  ಯಮಕನಮರಡಿ: ಇಲ್ಲಿನ ಯಮಕನಮರಡಿಯಲ್ಲಿ ಕಿರಾಣಿ ಅಂಗಡಿ ಮಾಲೀಕರೊಬ್ಬರನ್ನು ಶನಿವಾರ ಬರ್ಬರವಾಗಿ ಕೊಲೆಗೈಯ್ಯಲಾಗಿದೆ.

ಹೊಸಪೇಟೆ ನಿವಾಸಿ ಪರಶುರಾಮ ಸಿದ್ದಲಿಂಗಯ್ಯ ಹಲಕರ್ಣಿ(32) ಕೊಲೆಯಾದವರು.   ಬಸವರಾಜ ಭರಮಪ್ಪ ಗಲಾಟಿ (30) ಮಂಜುನಾಥ ಲಕ್ಷ್ಮಣ ಪುಟ್ಜಾನೆ (24), ಕೆಂಪಣ್ಣ ಅರ್ಜುನ್ ನೇಸರ್ಗಿ ಕೊಲೆಗೈದ ಆರೋಪಿಗಳು.

ಕೊಲೆ ನಡೆದ ಕೆಲವೇ ಹೊತ್ತಿನಲ್ಲಿ ಆರೋಪಿಗಳಾದ ಮಂಜುನಾಥ ಹಾಗೂ ಕೆಂಪಣ್ಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಇನ್ನೊಬ್ಬ ಾರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಕೊಲೆಗೆ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

ಸವದತ್ತಿ: ವಿದ್ಯುತ್ ಶಾಕ್ ತಗುಲಿ ಇಬ್ಬರು ರೈತರ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button