Latest

ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ: ನಳೀನ್ ಕುಮಾರ್ ಕಟೀಲ್

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಬಿಜೆಪಿಯಲ್ಲಿ ಯಾವುದೇ ಭಿನ್ನಮತವಾಗಲಿ, ಬಿನ್ನಾಭಿಪ್ರಾಯಗಳಾಗಲಿ ಇಲ್ಲ. ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟಿಲ್, ಕೆಲವು ಶಾಸಕರು ಒಟ್ಟಿಗೆ ಒಂದೆಡೆ ಊಟ ಮಾಡಿ, ಚಹಾ ಕುಡಿದ ಮಾತ್ರಕ್ಕೆ ಭಿನ್ನಮತ ಎಂದು ಬಿಂಬಿಸುವುದು ಸರಿಯಲ್ಲ.

Home add -Advt

ಇದೇ ವೇಳೆ ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಎಂಬ ಹೇಳಿಕೆ ನೀಡಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕಟೀಲ್, ಸಿದ್ದರಾಮಯ್ಯ ಗೊಂದಲ ಸೃಷ್ಟಿಸುವುದರಲ್ಲಿ ನಂಬರ್ ಒನ್. ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದಾಗ ಬೇರೆ ಕೈಗಳು ಕೆಲಸ ಮಾಡಿದ್ದಾವೋ ಇಲ್ವೋ ಎಂದು ನನಗೆ ಗೊತ್ತಿಲ್ಲ, ಆದರೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕುಮಾರಸ್ವಾಮಿಯನ್ನ ಕೆಳಗಿಳಿಸುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಬ್ಬರೇ ಸಿಎಂ ಅವರೇ ಯಡಿಯೂರಪ್ಪ. ಅವರೇ ನಮ್ಮ ಏಕೈಕ ನಾಯಕ ಎಂದು ತಿಳಿಸಿದರು.

ನಟ ಚಿರಂಜೀವಿ ಸರ್ಜಾ ನಿಧನ ಹಿನ್ನಲೆಯಲ್ಲಿ ಸಂತಾಪ ಸೂಚಿಸಿದ ನಳೀನ್ ಕುಮಾರ್ ಕಟೀಲ್, ಅದ್ಭುತ ಕಲಾವಿದನನ್ನ ನಾವಿಂದು ಕಳೆದುಕೊಂಡಿದ್ದೇವೆ. ಸರ್ಜಾ ಇಡೀ ಕುಟುಂಬ ಚಲನಚಿತ್ರಕ್ಕೆ ಅರ್ಪಿಸಿಕೊಂಡಿದ್ದರು. ಬೆಳೆಯಬೇಕಾದ ಪ್ರತಿಭೆಯನ್ನ ಕಳೆದುಕೊಂಡಿರುವುದು ದು:ಖವನ್ನುಂಟುಮಾಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ನೀಡಲಿ ಎಂದರು.

Related Articles

Back to top button