Belagavi NewsBelgaum NewsKannada News

ರವಿವಾರ ಪೇಠೆ ಗಣೇಶೋತ್ಸವ ಮಂಡಳಕ್ಕೆ ನೂತನ ಕಾರ್ಯಕಾರಿ ಸಮಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರವಿವಾರ ಪೇಠ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ಸದಸ್ಯರ ಸಭೆಯುಜೂ. ೨೬ ರಂದು ಮುಕ್ತಾಯಗೊಂಡು ಹಾಗೂ ಮುಂಬರುವ ವರ್ಷಕ್ಕೆ ನೂತನಕಾರ್ಯಕಾರಿಣಿಯನ್ನು ನೇಮಿಸಲಾಯಿತು.

ಗೌರವಾಧ್ಯಕ್ಷ- ಪ್ರಕಾಶ ಬಾಳೇಕುಂದ್ರಿ, ಅಧ್ಯಕ್ಷ- ಬಾಳಪ್ಪ ಕಗ್ಗಣಗಿ, ಉಪಾಧ್ಯಕ್ಷ- ವೆಂಕಟೇಶ ಹಿಶೋಬಕರ, ರಾಜಶೇಖರ ಚೋನಂದ್, ದಿಗಂಬರ ತೆಂಡೂಲ್ಕರ, ಚೇತನ್ ಹಿಡದುಗ್ಗಿ, ಖಜಾಂಚಿ- ಕೆ.ಗಣೇಶ್ ಭಟ, ಜಂಟಿ ಖಜಾಂಚಿ- ಅಂಕುರ ಪಟೇಲ, ಕಾರ್ಯದರ್ಶಿ- ವಿರೇಶ್ ಉಳವಿ , ಜಂಟಿ ಕಾರ್ಯದರ್ಶಿ- ವಿಶಾಲ ಉಂಡಾಲೆ. ಸದಸ್ಯ- ಪ್ರದೀಪ ಪಾಟೀಲ, ಶಂಕರ ಅಥಾನಿಮಠ, ಬಸವರಾಜ ಉಪ್ಪಿನ್, ಪ್ರಕಾಶ್‌ ಜೆ.ಡಿ., ನಿಖಿಲ ಜೊಂಡ, ಮಯೂರ ಶಾಂಖಲಾ, ಉಮೇಶ ಶರ್ಮಾ, ಚೇತನ ಗುಂಜಾಟಿ, ಅತುಲ ಗುಂಡಕಲ, ಈಶ್ವರ ಹುಬ್ಬಳ್ಳಿ, ಕಿಂಜಲ ಪಟೇಲ, ವಿಶ್ವನಾಥ ಬಡ್ಡೆ, ಪಿಂಕೇಶ ಪಟೇಲ, ಅನಿಲ ಹುಕ್ಕೇರಿ, ಗಿರೀಶ ಬಾಗಿ, ವಿಷ್ಣು ಪ್ರಸಾದ ಸಂಖಲಾ, ಮಹೇಶ ಬಾಗಿ, ಪ್ರದೀಪತೆಲಸಂಗ, ಪವನ ಶಾಂಖಲಾ, ಭಾಲಚಂದ್ರ ಬಾಗಿ, ಮಿಲಿಂದ ನಾರ್ವೇಕರ, ಚೇತನ್ ಹುಬಳಿ ಮತ್ತುಉದಯ ಬಾಗಿ.

೧೯೯೧ ರಿಂದ ಕಳೆದ ೩೨ ವರ್ಷಗಳಿಂದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಭಾನುದಾಸ ಉರ್ಫ್‌ ದಾದಾ ಅಜಗಾಂವಕರ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಗಮನಾರ್ಹ ಕಾರ್ಯವನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ಗಣೇಶೋತ್ಸವ ಮಂಡಲಕ್ಕೆ ನೀಡಿದ ಅವರ ಸೇವೆಗೆ ಎಲ್ಲರೂ ಕೃತಜ್ಞತೆ ಸಲ್ಲಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button