Film & EntertainmentKannada NewsKarnataka NewsLatest

*ವಿದೇಶದಲ್ಲಿ ಪತ್ನಿಯ ಕೈಹಿಡಿದು ಹೆಜ್ಜೆ ಹಾಕಿದ ನಿಖಿಲ್ ಕುಮಾರಸ್ವಾಮಿ‌..*

ಪ್ರಗತಿವಾಹಿನಿ ಸುದ್ದಿ : ನಟನೆ, ಚುನಾವಣೆ ಹಾಗೂ ರಾಜಕೀಯ ಜಂಜಾಟದಿಂದ ಕೊಂಚ ಬ್ರೇಕ್ ಪಡೆದು ನಿಖಿಲ್ ಕುಮಾರಸ್ವಾಮಿ‌ ವಿದೇದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಕುಟುಂಬದ ಜೊತೆ ವಿದೇಶಿ ಪ್ರವಾಸದಲ್ಲಿರುವ ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಟ್ಟು ಅದ್ಭುತ ಕ್ಷಣಗಳ ಫೋಟೋಗಳು ಹಂಚಿಕೊಂಡ ನಿಖಿಲ್ ತಮ್ಮ‌ ಸೋಷಿಯಲ್ ಮೀಡಿಯಾದಲ್ಲಿ‌ ಹಂಚಿಕೊಂಡಿದ್ದಾರೆ.

ನಿಖಿಲ್‌ ಪತ್ನಿ ರೇವತಿ ಕೈಹಿಡಿದು ನಡೆದ ವಿಡಿಯೋ ಇದೀಗ ಸಾಮಾಜಿಕ‌ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. ದೊಡ್ಡಗೌಡರ ಕುಟುಂಬದ ಸೊಸೆಯಾಗಿದ್ದರು ರೇವತಿ ತುಂಬಾ ಸಿಂಪಲ್. ಸದಾ ನಗು ಮುಖದಿಂದ ಮುದ್ದಾಗಿ ಕಾಣುವ ರೇವತಿ ತಮ್ಮ ಸಿಂಪ್ಲಿಸಿಟಿಯಿಂದಲೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.‌ ನಿಖಿಲ್ ರೇವತಿಯೊಂದಿಗೆ ಹಾಕುವ ಫೋಟೋಸ್ ಯಾವಾಗಲು ಟ್ರೆಂಡಿಂಗ್ ನಲ್ಲಿ ಇರುತ್ತವೆ.

Home add -Advt

ಐಲ್ಯಾಂಡ್‌ನಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನಿನ್ನೆ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದಾರೆ. ವಿದೇಶದ ರಸ್ತೆ ಮೇಲೆ ಹೆಂಡತಿ ಕೈ ಹಿಡಿದು ನಿಖಿಲ್ ವಾಕಿಂಗ್ ಮಾಡ್ತಿರೋ ವಿಡಿಯೋವನ್ನ ತನ್ನ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅವರ ಇಡೀ ಫ್ಯಾಮಿಲಿ ವಿದೇಶಿ ಪ್ರವಾಸ ಕೈಗೊಂಡಿದೆ. ಯುರೋಪ್ ದೇಶಗಳಲ್ಲಿ ಟ್ರಿಪ್ ಮಾಡುತ್ತಿರುವ ಹೆಚ್.‌ಡಿ ಕುಮಾರಸ್ವಾಮಿ ಕುಟುಂಬದ ಫೋಟೋಗಳು ವೈರಲ್ ಆಗುತ್ತಿವೆ.‌

Related Articles

Back to top button