*ಸಚಿವ ಸ್ಥಾನಕ್ಕಾಗಿ ಯಾರ ಮನೆಯ ಬಾಗಿಲು ಕಾಯುದಿಲ್ಲ: ಲಕ್ಷ್ಮಣ ಸವದಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಚಿವ ಸ್ಥಾನಕ್ಕಾಗಿ ಯಾರ ಮನೆಯ ಬಾಗಿಲು ಕಾಯುವ ಕಾರ್ಯವನ್ನು ಈ ಸ್ವಾಭಿಮಾನಿ ಮಾಡುವದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ 2.0 ಅಡಿಯಲ್ಲಿ ಅಥಣಿ ಪಟ್ಟಣದ 24*7 ನೀರು ಸರಬರಾಜು ಯೋಜನೆಯ ಭೂಮಿಪೂಜೆ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಅಂತಹ ಅನೇಕ ಸ್ಥಾನಗಳನ್ನು ನಾನು ಆಗಲೇ ಅನುಭವಿಸಿರುವೆ. ನನಗೆ ದೊರೆತ ಇಲಾಖೆಗಳಲ್ಲಿ ನ್ಯಾಯಯುತವಾಗಿ, ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದ ತೃಪ್ತಿ ನನಗಿದೆ. ಏನೇ ಅಡೆತಡೆ ಬಂದರೂ ಮೆಟ್ಟಿ ನಿಲ್ಲುವ ಏದೆಗಾರಿಕೆಯಿದೆ ಅಲ್ಲದೇ ನನ್ನ ಜೊತೆ ನಿಮ್ಮ ಆರ್ಶಿವಾದ ಸದಾಕಾಲವೂ ಇರುತ್ತದೆ ಎಂಬ ಅಚಲವಾದ ನಂಬಿಕೆ ನನಗಿದೆ ಎಂದರು.
ಮೂರು ಅವಧಿಗೆ ಆಯ್ಕೆಯಾಗಿ ಬರುವಷ್ಟು ಮತವನ್ನು ಪ್ರಂಜಲ್ ಮನಸ್ಸಿನಿಂದ ನನ್ನ ಮೇಲಿನ ವಿಶ್ವಾಸ ನಂಬಿಕೆಯಿಂದ ನೀಡಿದ್ದರಿ ಅದನ್ನ ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು ನಿಮ್ಮ ಹೆಸರಿಗೆ ಹೂವನ್ನು ತರುವೆ ಹೋರತು ಹುಲ್ಲನ್ನು ತರಲಾರೆಂದರು.
ಅಥಣಿ ಪಟ್ಟಣದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿ ಕೊಳ್ಳಲಾಗಿದ್ದು ಮೂಲಭೂತ ಸೌಲಭ್ಯಗಳನ್ನು ಒದಗಿಸುವದಾಗಿದೆ.ಆ ನಿಟ್ಟಿನಲ್ಲಿ ಯುಜಿಡಿ ಯೋಜನೆ,ಕರೆ ಅಭಿವೃದ್ಧಿ, ಕೇಂದ್ರೀಯ ವಿದ್ಯಾಲಯ, ಹಳ್ಳಕ್ಕೆ ಕೇನಾಲ ಮಾದರಿಯ ಘಟಾರ ನಿರ್ಮಾಣದ ಜೊತೆಗೆ ಬೈಪಾಸ್ ರಸ್ತೆ ಮತ್ತು ಪಟ್ಟಣ ಸ್ವಚ್ಛತೆಗೆ ಆದ್ಯತೆ ನೀಡುವ ಕಾರ್ಯ ಅಧಿಕಾರಿಗಳ ಜೊತೆ ಸದಸ್ಯರು ಸಹಕರಿಸಲು ಹೇಳಿದ ಅವರು ಅಧಿಕಾರ ಯಾರಿಗೂ ಶಾಶ್ವತವಲ್ಲ ನೀವು ಆಯ್ಕೆಯಾದ ವಾಡ್೯ಗಳ ಅಭಿವೃದ್ಧಿಗೆ ಬೇಕಾದ ಸೌಲಭ್ಯ ಒದಗಿಸಲು ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.
ಕಾಮಗಾರಿ ಕುರಿತು ಮಾಹಿತಿ ನೀಡಿದ ಅವರು ಕೃಷ್ಣಾ ನದಿಯಿಂದ ಹುಲಗಬಾಳಿ ಗ್ರಾಮದ ಹತ್ತಿರ ಒಂದು ಜಾಕ್ವೆಲ್ ಮೂಲಕ ನೀರನ್ನು ಪಟ್ಟಣಕ್ಕೆ ತಂದು ಕೊಡಲಾಗುವುದು, ಸುಮಾರು 185 ಕಿ.ಮೀ ಪೈಪ್ ಲೈನ್ ಮಾಡಿ, ಆಧುನಿಕ ಯಂತ್ರೋಪಕರಣಗಳ ಮೂಲಕ ಶುದ್ದೀಕರಣ ಮಾಡಿ ನಳದ ಮೂಲಕ ಪ್ರತಿಯೊಂದು ಮನೆಗೆ ನೀರು ಕೊಡುವ ಯೋಜನೆ ಪಟ್ಟಣದಿಂದ ಎರಡು ಕಿ.ಮೀ ವರೆಗೆ ಎಲ್ಲರಿಗೂ ಸುಮಾರು 25 ವರ್ಷಗಳ ಕಾಲ ಕೊಡುವುದಾಗಿದೆ, ಈ ಯೋಜನೆಗೆ ಕೇಂದ್ರದಿಂದ 50% , ರಾಜ್ಯ ಸರಕಾರದಿಂದ 40% ಹಾಗೂ ಸ್ಥಳೀಯ ಪುರಸಭೆಯಿಂದ 10% ಅನುದಾನ ಬಂದಿದೆ ಎಂದರು.
ಅನಂತರ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರು ಮಾತನಾಡಿ ಅಥಣಿ ಪಟ್ಟಣದ 177 ವರ್ಷಗಳ ಇತಿಹಾಸದಲ್ಲಿ ಅತೀ ದೊಡ್ಡ ಮೊತ್ತದ ಅಭಿವೃದ್ದಿ ಕಾಮಗಾರಿ, ಅಥಣಿ ಪಟ್ಟಣದ ನಮ್ಮ ಮುಂದಿನ ಹತ್ತಾರು ತಲೆಮಾರುಗಳ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ಮಾನ್ಯ ಶಾಸಕರು ಜಾರಿ ಮಾಡಿದ್ದಾರೆ ಎಂದರು.
ಅಥಣಿ ನಾಗರಿಕರ ಪರವಾಗಿ ಮಲ್ಲಿಕಾರ್ಜುನಹಂಜಿ ಮಾತನಾಡಿದರು. ಈ ವೇಳೆ ಮುಖಂಡ ಶಿವಕುಮಾರ ಸವದಿ ಅಭಿಯಂತರ ಆರ್ ಕೆ ಉಮೇಶ, ಡಾ ಅವಿನಾಶ ನಾಯಿಕ, ಪುರಸಭೆ ಸದಸ್ಯರಾದ ಕಲ್ಲೇಶ ಮಡ್ಡಿ, ಸಂತೋಷ ಸಾವಡಕರ, ರಾಜು ಗುಡೋಡಗಿ, ದತ್ತಾ ವಾಸ್ಟರ್, ರಮೇಶ ಪವಾರ, ಅಸೀಫ ತಾಂಬೋಳಿ, ಬೀರಪ್ಪಾ ಯಂಕಚ್ಚಿ, ರೀಯಾಜ ಸನದಿ, ಮೃಣಾಲಿನಿ ದೇಶಪಾಂಡೆ, ದಿಲೀಪ ಲೋಣಾರೆ ಚಂದು ತೇರದಾಳ, ಶೇಖರ ನೇಮಗೌಡ, ಆನಂದ ಟೊನಪಿ ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ