Belagavi NewsBelgaum NewsKannada NewsKarnataka NewsPolitics

*ಯಾರ ಆಸ್ತಿಯನ್ನು ತೆರೆವುಗೊಳಿಸಲ್ಲ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ನಾಲಾ ಕಾಮಗಾರಿ: ಶಾಸಕ ಅಭಯ ಪಾಟೀಲ್* 

ಪ್ರಗತವಾಹಿನಿ ಸುದ್ದಿ: ಬೆಳಗಾವಿಯ ಆನಂದ ನಗರ ಒಂದನೇ ಅಡ್ಡರಸ್ತೆಯ ನಾಲಾ ಕಾಮಗಾರಿಯನ್ನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಭರವಸೆ ನೀಡಿದರು.

Home add -Advt

ಆನಂದ ನಗರ, ಒಂದನೇ ಅಡ್ಡರಸ್ತೆ ವಡಗಾವದಲ್ಲಿ ಹರಿಯುತ್ತಿರುವ ನಾಲಾ ಅಭಿವೃದ್ಧಿ ಕಾಮಗಾರಿಯಿಂದಾಗಿ ದಲಿತ ಕುಟುಂಬಗಳು ಬೀದಿಗೆ ಬರಲಿವೆ ಆದ್ದರಿಂದ ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಶಾಸಕ ಅಭಿಯ ಪಾಟೀಲ್ ಅವರಿಗೆ  ಮನವಿ ಸಲ್ಲಿಸಲಾಯಿತು. ಕಾಮಗಾರಿ ಆರಂಭಿಸುತ್ತಿರುವುದರಿಂದ ಇಲ್ಲಿರುವ ರೈತರಿಗೆ ತೊಂದರೆ ಉಂಟಾಗಲಿದೆ ಎಂಬ ಊಹಾಪೋಹ ಸೃಷ್ಟಿಯಾಗಿದೆ. ಆದ್ದರಿಂದ ಈ ಕಾಮಗಾರಿಯನ್ನು ಆರಂಭಿಸುವ ಮುನ್ನ ದಲಿತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಕಾಮಗಾರಿಯ ವೇಳೆ ಯಾರ ಮನೆಯನ್ನೂ ತೆರವುಗೊಳಿಸಲಾಗುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮಾಡಲಾಗುವುದೆಂದು ಭರವಸೆ ನೀಡಿದರು. 

 ಈ ಸಂದರ್ಭದಲ್ಲಿ ಆನಂದ ನಗರ ಒಂದನೇ ಅಡ್ಡರಸ್ತೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Related Articles

Back to top button