ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿಧಾನಪರಿಷತ್ ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಅಂತಿಮವಾಗಿ 23 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಪದವೀಧರ ಕ್ಷೇತ್ರಕ್ಕೆ 16 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 12 ಸೇರಿ ಒಟ್ಟು 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ 5 ಉಮೇದುವಾರರು ನಾಮಪತ್ರ ಹಿಂಪಡೆದರು. ಇದರಿಂದ ಅಂತಿಮವಾಗಿ 23 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದಂತಾಗಿದೆ.
ನಾಮಪತ್ರ ಹಿಂಪಡೆದವರು:
ಪದವೀಧರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ೧೬ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಸಾಗರ ಅಕ್ಕತಂಗೇರಹಾಳ, ಮಲ್ಲಿಕಾರ್ಜುನ ಗಂಗಾಧರ, ಭಾರತಿ ಚಿಕ್ಕನರಗುಂದ, ಮಲ್ಲಪ್ಪ ನೇಮಗೌಡರ್, ಹಾಗೂ ರಾಘವೇಂದ್ರ ಕೊಕಟನೂರ ಅವರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.
ಶಿಕ್ಷಕರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ 12 ಅಭ್ಯರ್ಥಿಗಳಲ್ಲಿ ಯಾರೂ ನಾಮಪತ್ರ ಹಿಂಪಡೆದಿಲ್ಲ.
ಕಣದಲ್ಲಿ ಉಳಿದವರು
ವಾಯವ್ಯ ಪದವೀಧರ ಕ್ಷೇತ್ರ:
ಹನುಮಂತ ನಿರಾಣಿ (ಬಿಜೆಪಿ), ಸುನೀಲ್ ಸಂಕ (ಕಾಂಗ್ರೆಸ್ ), ಜಿ. ಸಿ. ಪಾಟೀಲ್ (ಸರ್ವ ಜನತಾ ಪಾರ್ಟಿ), ಯಲ್ಲಪ್ಪಾ ಕಲಕುತ್ರಿ (ಕರ್ನಾಟಕ ರಾಷ್ಟ್ರ ಸಮೀತಿ ಪಾರ್ಟಿ) ಆದರ್ಶಕುಮಾರ್ ಪೂಜಾರಿ (ಪಕ್ಷೇತರ ), ಘಟಿಗೆಪ್ಪ ಮಗದುಂ (ಪಕ್ಷೇತರ), ದೀಪಿಕಾ ಎಸ್. ಪಕ್ಷೇತರ, ನಿಂಗಪ್ಪ ಭಜಂತ್ರಿ (ಪಕ್ಷೇತರ), ಭೀಮಸೇನ ಬಾಗಿ (ಪಕ್ಷೇತರ), ರಾಜಗೌಡ ಪಾಟೀಲ್ (ಪಕ್ಷೇತರ), ಸುಭಾಸ್ ಕೋಟೆಕಲ್ (ಪಕ್ಷೇತರ)
ವಾಯವ್ಯ ಶಿಕ್ಷಕರ ಕ್ಷೇತ್ರ:
ಪ್ರಕಾಶ ಹುಕ್ಕೇರಿ (ಕಾಂಗ್ರೆಸ್), ಅರುಣ್ ಶಹಾಪುರ್ (ಬಿಜೆಪಿ), ಚಂದ್ರಶೇಖರ ಲೋನಿ (ಜೆಡಿಎಸ್), ಅಪ್ಪಾ ಸಾಹೇಬ್ ಕುರಣೆ (ಪಕ್ಷೇತರ), ಚಂದ್ರಶೇಖರ ಗುಡಸಿ (ಪಕ್ಷೇತರ), ಜಯಪಾಲ್ ದೇಸಾಯಿ (ಪಕ್ಷೇತರ), ನಿಂಗಪ್ಪಾ ಬನ್ನೂರ್ (ಪಕ್ಷೇತರ), ಬಸಪ್ಪ ಮನಿಗಾರ (ಪಕ್ಷೇತರ), ಶ್ರೀಕಾಂತ ಪಾಟೀಲ್ (ಪಕ್ಷೇತರ), ಶ್ರೀನಿವಾಸ್ ಗೌಡರ್ (ಪಕ್ಷೇತರ), ಶೇನಿಕ್ ಜಾಂಗಟೆ (ಪಕ್ಷೇತರ), ಸಂಗಮೇಶ ಚಿಕ್ಕನರಗುಂದ (ಪಕ್ಷೇತರ).
ಡಿ.ಕೆ.ಶಿವಕುಮಾರ್ ಗೆ ಸಮನ್ಸ್ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ