ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹೊರಗುತ್ತಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಸೋಮವಾರದಿಂದ ನೀರು ಪೂರೈಕೆಯಲ್ಲಿ ವೈತ್ಯಯವಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಮಂಡಳಿ, ಹೊರಗುತ್ತಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಜ.೧೦ ರಿಂದ ಬೆಳಗಾವಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಎಲ್ ಆ್ಯಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಒಳಚರಂಡಿ ಮಂಡಳಿಯಿಂದ ಎಲ್ & ಟಿ ಗೆ ಹಸ್ತಾಂತರಗೊಂಡಿರುವ ವಾಲ್ವಮನ್, ಸೂಪರ್ ವೈಸರ್, ಪಂಪ್ ಆಪರೇಟರ್ ಮತ್ತು ಹೆಲ್ಪರ್ ಗಳು ಜನೆವರಿ 10ರಿಂದ ಮುಷ್ಕರ ಕೈಗೊಂಡಿದ್ದಾರೆ.
ಮುಷ್ಕರ ಅನಿರ್ಧಿಷ್ಟ ಅವಧಿಯದ್ದಾಗಿರುವುದರಿಂದ ನೀರು ಪೂರೈಕೆ ಯಾವಾಗ ಸರಿಯಾಗಲಿದೆ ಎನ್ನುವು ಕುರಿತಾಗಲಿ, ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆಯಾಗಲಿ ಒಳಚರಂಡಿ ಮಂಡಳಿ ಯಾವುದೇ ಮಾಹಿತಿ ನೀಡಿಲ್ಲ.
ಚನ್ನರಾಜ ಹಟ್ಟಿಹೊಳಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸೋಮವಾರ ಬೆಳಗಾವಿಗೆ ಆಗಮನ
ಪಾದಯಾತ್ರೆ ಅರ್ಧಕ್ಕೆ ಬಿಟ್ಟ ಸಿದ್ದರಾಮಯ್ಯ; ಚಿಕಿತ್ಸೆಗಾಗಿ ಬೆಂಗಳೂರಿಗೆ ವಾಪಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ