Kannada NewsKarnataka NewsLatest
*ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ನೇಮಕ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿನಿಯಮ, 2005ರ ಪ್ರಕರಣ (18)ರ ಅನ್ವಯ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕರ್ನಾಟಕ ನಿಯಮಗಳು 2010ರ ನಿಯಮ, (3) ಮತ್ತು (ತಿದ್ದುಪಡಿ) ಕರ್ನಾಟಕ ನಿಯಮ, 2025ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ. ಈ ಕೆಳಕಂಡಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶಿಸಿದೆ.
ಸತ್ಯನಾರಾಯಣ ಶೆಟ್ಟಿ, ನಂ.104, 1ನೇ ಮಹಡಿ, ಸತ್ಯಾ ಗಾರ್ಡನ್ ಹತ್ತಿರ, ಸಿಂಧನೂರು, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ-584128.
ಜಗನ್ನಾಥ ಹಲಮಡಗಿ, ಕಂಟೆಪ್ಪ ಹಲಮಡಗಿ, ನಂ. 11/12, ಹುಮನಾಬಾದ್, ಹುಮನಾಬಾದ್ ತಾಲ್ಲೂಕು, ಬೀದರ್ ಜಿಲ್ಲೆ
ವೆಂಕಟೇಶ್. ನಂ.43, ಕೆ.ಹೆಚ್.ಬಿ. ಕಾಲೋನಿ, ಹೊಸಹಳ್ಳಿ ಎಕ್ಸ್ಟೇನ್ನ ಬಡಾವಣೆ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ-571401.




