Kannada NewsKarnataka NewsLatest

ಛೀ… ಅಮಾನವೀಯ…. ಹೇಯ ಕೃತ್ಯ

 ಪ್ರಗತಿವಾಹಿನಿ ಸುದ್ದಿ, ಅಥಣಿ -ಇದೊಂದು ನಾಗರಿಕ ಸಮಾಜವೇ ತಲೆ ತಗ್ಗಿಸಬೇಕಾದ ಘಟನೆ. ಖಟುವಾದ ಶಬ್ಧಗಳಲ್ಲಿ ಖಂಡಿಸಬೇಕಾದ ಹೇಯ ಕೃತ್ಯ. ನೀವು ಓದಿದರೆ ಇಂತಹ ಘಟನೆಗಳೂ ನಡೆಯುತ್ತವಾ? ಎಂದು ಪ್ರಶ್ನಿಸುತ್ತೀರಿ.

ಅಥಣಿ ತಾಲೂಕಿನ ಗ್ರಾಮವೊಂದರ ಸಕಾ೯ರಿ ಪ್ರೌಢಶಾಲೆಯ ಶೌಚಾಲಯದಲ್ಲಿ ಈಚೆಗೆ ಆಗ ತಾನೆ ಹುಟ್ಟಿದ್ದ ನವಜಾತ ಶಿಶುವೊಂದು ರಕ್ತಸಿಕ್ತವಾಗಿ ಬಿದ್ದಿತ್ತು. ಶಿಶು ಅಳುವುದನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಶಿಶುವನ್ನು ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದ್ದರು.

Home add -Advt

ಆದರೆ ಆ ಶಿಶು ಹೇಗೆ ಬಂತು? ಅಲ್ಲಿನ ದೃಷ್ಯ ನೋಡಿದವರಿಗೆ ಇದು ಹೊರಗಿನಿಂದ ಯಾರೋ ತಂದು ಬೀಸಾಡಿದ ಶಿಶುವಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುವಂತಿತ್ತು. ಪೊಲೀಸರು ತನಿಖೆ ಆರಂಭಿಸಿದರು.

ತನಿಖೆಯಿಂದ ಹೊರಬಂದ ವಿಷಯ ತಿಳಿದರೆ ಎಂತವರ ಎದೆಯೂ ಝಲ್ಲೆನ್ನುತ್ತದೆ.

ಆ ಶಿಶುವನ್ನು ಹೆತ್ತವಳು ಅದೇ ಶಾಲೆಯಲ್ಲಿ ಓದುತ್ತಿರುವ 10ನೇ ತರಗತಿಯ ವಿದ್ಯಾರ್ಥಿನಿ ಎನ್ನುವುದು ಬೇಳಕಿಗೆ ಬಂತು. ಶನಿವಾರ ಮಧ್ಯಾಹ್ನ ಶಾಲೆ ಮುಗಿದ ನಂತರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಶೌಚಾಲಯದಲ್ಲೇ ಉಳಿದುಕೊಂಡ ವಿದ್ಯಾರ್ಥಿನಿ ಅಲ್ಲೆ ಮಗುವನ್ನು ಹೆತ್ತಿದ್ದಾಳೆ. ನಂತರ ಶಿಶುವನ್ನು ಬಿಟ್ಟು ಅಲ್ಲಿಂದ ತೆರಳಿದ್ದಾಳೆ.

ಶಿಕ್ಷಕ ಆರೆಸ್ಟ್

ಪೊಲೀಸರು ತನಿಖೆಯನ್ನು ಮುಂದುವರಿಸಿದಾಗ ವಿದ್ಯಾರ್ಥಿನಿ ಗರ್ಭ ಧರಿಸಲು ಕಾರಣನಾದವನು ಅದೇ ಶಾಲೆಯ ವಿವಾಹಿತ ಶಿಕ್ಷಕ ಎನ್ನುವುದು ಬಯಲಾಗಿದೆ.  ಶಿಕ್ಷಕ ಬಸಪ್ಪ ಕುಂಬಾರ ಎಂಬಾತನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿರುವ ಐಗಳಿ ಪೊಲೀಸರು, ಆತನನ್ನು ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.

 ವಿದ್ಯಾಥಿ೯ನಿಯು ಗಭಿ೯ಣಿಯಾಗಿರುವ ವಿಷಯ ಊರಲ್ಲೆಲ್ಲ ಗೊತ್ತಿದ್ದರೂ ಅದನ್ನು ಮುಚ್ಚಿಹಾಕಲು ಯತ್ನಿಸಲಾಗಿತ್ತು.  ಶಿಕ್ಷಕ ಈ ವಿಷಯವನ್ನು ಹೊರಗೆ ತಿಳಿಸದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಆತನಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

Related Articles

Back to top button